ಚಿತ್ರದುರ್ಗ: ಬಾಂಗ್ಲಾದೇಶ ಎಂದು ಇಬ್ಭಾಗವಾದಾಗ ಭಾರತ ದೇಶ ಬಾಂಗ್ಲಾದೇಶದ ಬೆನ್ನೆಲುಬಾಗಿ ನಿಂತುಕೊಂಡಿತ್ತು. ಆದರೆ ಇಂದಿನ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಮಾದರ ಚೆನ್ನಯ್ಯ ಶ್ರೀಗಳು ತಿಳಿಸಿದರು.
ಚಿತ್ರದುರ್ಗ ನಗರದ ಡಿಸಿ ಸರ್ಕಲ್ ಬಳಿ ಹಿಂದೂ ಸಂರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಸ್ಲಾಮಿಕ್ ರಾಜರ ದಬ್ಬಾಳಿಕೆಯಿಂದಾಗಿ ಬಾಂಗ್ಲಾದೇಶ ಸಂಪೂರ್ಣವಾಗಿ ಇಸ್ಲಾಮಿಕ್ ದೇಶವಾಗಿ ಬದಲಾವಣೆಗೊಂಡಿದೆ. ಅರಬ್ ರಾಷ್ಟ್ರಗಳ ಸಹಾಯ ಸಾಕಷ್ಟು ಇದೆ. ಹಾಗಾಗಿ ಹಿಂದೂಗಳು ಆ ದೇಶದಲ್ಲಿ ಕಷ್ಟ ಕಾರ್ಪಣ್ಯದಿಂದ ಬದುಕುತ್ತಿದ್ದಾರೆ ಎಂದು ತಿಳಿಸಿದರು.
ಭಾರತ ದೇಶದಲ್ಲಿ ಕೂಡ ಇಸ್ಲಾಮಿಕ್ ನಡುವೆ ಮತ್ತು ಹಿಂದೂಗಳ ನಡುವೆ ಸಂಘರ್ಷಗಳು ನಡೆಯಬಾರದೆಂದು ತಿಳಿಸಿದರು.
PublicNext
04/12/2024 04:05 pm