ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಳಕಾಲ್ಮೂರು: ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು 2013ರಲ್ಲಿ ಕಾಣದ ಕೈಗಳ ಷಡ್ಯಂತ್ರ ಅಡಗಿತ್ತು -ಶಾಸಕ ಎನ್.ವೈ. ಗೋಪಾಲಕೃಷ್ಣ

ಮೊಳಕಾಲ್ಮುರು: ರಾಜಕೀಯವಾಗಿ ನಮ್ಮ ಕುಟುಂಬವನ್ನು ಮುಗಿಸಲು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಣದ ಕೈಗಳು ಕೆಲಸ ಮಾಡಿದವು. ಒಳ್ಳೆಯವರನ್ನು ದೇವರು ಎಂದೂ ಕೈಬಿಡಲ್ಲ ಎನ್ನುವುದಕ್ಕೆ ಆರೇ ತಿಂಗಳಲ್ಲಿ ಮತ್ತೆ ನನಗೆ ರಾಜಕೀಯ ಭವಿಷ್ಯ ಸಿಕ್ಕಿತು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಧಿಕಾರ ಯಾರಿಗೂ ಶಾಶ್ವತವಲ್ಲ, ನಾಳೆ ಇರುತ್ತೆ ಹೋಗುತ್ತೆ. ಆದರೆ ನಾವು ಮಾಡಿದ ಉತ್ತಮ ಕೆಲಸಗಳು ನಮ್ಮನ್ನು ಸದಾ ಸ್ಮರಿಸಬಲ್ಲವು. 2013 ರ ಚುನಾವಣೆಯಲ್ಲಿ ನಮ್ಮ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಯತ್ನ ಸದ್ದಿಲ್ಲದೇ ನಡೆಯಿತು. ಆದರೆ ದೇವರು ಎಂದೂ ಕೂಡ ನನ್ನನ್ನು ಕೈಬಿಡಲಿಲ್ಲ.

ಆರೇ ತಿಂಗಳಲ್ಲಿ ಗೊತ್ತು ಗುರಿಯಿಲ್ಲದ ಬಳ್ಳಾರಿ ಕ್ಷೇತ್ರದಲ್ಲಿ ಸ್ಫರ್ಧೆ ಮಾಡಿದಾಗ ಜನರು ನನಗೆ ಆಶೀರ್ವದಿಸಿದರು. ಕೂಡ್ಲಿಗಿಯಲ್ಲಿ ಸ್ಫರ್ಧೆ ಮಾಡಿದಾಗ ಅಲ್ಲಿಯ ಜನರು ನನ್ನ ಗೆಲುವಿಗೆ ಶ್ರಮಿಸಿದರು.ಇದಕ್ಕೆಲ್ಲಾ ಕಾರಣ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳು ಮತ್ತು ಒಳ್ಳೆಯತನ ಬಿಟ್ಟರೆ ಬೇರೇನೂ ಇಲ್ಲ,ಇದು ನನ್ನ ಸ್ವಂತ ಕ್ಷೇತ್ರ ನನ್ನ ತವರನ್ನು ಅಭಿವೃದ್ಧಿಪಡಿಸುವ ತವಕ ಇದೆ.ರಾಜಕೀಯ ಹೊರತು ಪಡಿಸಿ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

Edited By : Suman K
Kshetra Samachara

Kshetra Samachara

03/12/2024 07:25 pm

Cinque Terre

4.36 K

Cinque Terre

0

ಸಂಬಂಧಿತ ಸುದ್ದಿ