ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೀಟ್ ಬ್ಲಾಕಿಂಗ್ ದಂಧೆ, ಆರೋಪಿಗಳ ಜಾಲ ಪತ್ತೆ

ಬೆಂಗಳೂರು: ಅದು ವಿದ್ಯಾರ್ಥಿಗಳ ಭವಿಷ್ಯ ರೂಪಿಸೋ ಶೈಕ್ಷಣಿಕ ದಾರಿ ದೀಪ. ಸರ್ಕಾರದ ಮುಖಾಂತರ ಪ್ರತಿಷ್ಠಿತ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಸೀಟು ಪಡೆಯೋ ಪ್ರಕ್ರಿಯೆ. ಆದ್ರೆ ಆ ಹಂತದಲ್ಲೇ ದೊಡ್ಡ ಹಗರಣ ಪತ್ತೆಯಾಗಿದ್ದು, ಅರ್ಹ ಅಭ್ಯರ್ಥಿಗಳ ಬದಲಾಗಿ ಬೇರೆ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಿರೋ ಸಂಗತಿ ಬಯಲಾಗಿದೆ. ಕೆಇಎ ಸೀಟು ಹಂಚಿಕೆಯಲ್ಲಿ ನಡೆದ ಈ ಗೋಲ್ ಮಾಲ್ ನಲ್ಲಿ ಪ್ರತಿಷ್ಠಿತ ಕಾಲೇಜುಗಳು ಭಾಗಿಯಾಗಿದ್ದು, ಪೊಲೀಸರ ತನಿಖೆ ಚುರುಕುಗೊಂಡಿದೆ.

ಸರ್ಕಾರಿ ಕೋಟಾದ ಅಡಿ ಬರುವ ಇಂಜಿನಿಯರಿಂಗ್ ಸೀಟುಗಳ ಬ್ಲಾಕಿಂಗ್ ನಲ್ಲಿ ಗೋಲ್ ಮಾಲ್ ನಡೆದಿತ್ತು. ಈ ಬಗ್ಗೆ ಇತ್ತೀಚಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಸಂಬಂಧ ತನಿಖೆ ಕೈಗೊಂಡ ಮಲ್ಲೇಶ್ವರಂ ಪೊಲೀಸರು, 52 ಇಂಜಿನಿಯರಿಂಗ್ ಸೀಟ್ ಗಳ ಬ್ಲಾಕಿಂಗ್ ನಲ್ಲಿ ನಡೆದಿದ್ದ ಕಳ್ಳಾಟವನ್ನು ಪತ್ತೆ ಮಾಡಿದ್ದಾರೆ. ಜೊತೆಗೆ ಈ ಕೃತ್ಯ ಎಸಗಿದ್ದ ಕೆಇಎ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಓರ್ವ ವ್ಯಕ್ತಿ ಸಹಿತ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹರ್ಷ, ಪ್ರಕಾಶ್, ರವಿಶಂಕರ್, ಪುನೀತ್, ಶಶಿಕುಮಾರ್, ಪುರುಷೋತ್ತಮ್, ಅವಿನಾಶ್ ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದು, ಪೊಲೀಸರಿಗೆ ಆರೋಪಿಗಳ ಅಸಲಿ ಕಹಾನಿ ಬಯಲಾಗಿದೆ. ಆರೋಪಿಗಳು ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಹಾಗೂ ಕೆಲ ವ್ಯಕ್ತಿಗಳಿಗೆ ತಮ್ಮ ಮೂಲಕ ಖಾಸಗಿ ಕಾಲೇಜುಗಳಲ್ಲಿ ಸೀಟು ಕೊಡಿಸುವ ಸಲುವಾಗಿ ತಮ್ಮದೇ ಆದ ವ್ಯವಸ್ಥಿತ ಸಂಚು ರೂಪಿಸಿದ್ದರು. ಅದರಂತೆ, ಆರೋಪಿಗಳು ಕೆಇಎ ಪರೀಕ್ಷೆಯಲ್ಲಿ ಕೌನ್ಸೆಲಿಂಗ್ ಆಯ್ಕೆಯಾಗಿ ಬಾರದ ಅಭ್ಯರ್ಥಿಗಳ ಪಟ್ಟಿ ಮಾಡುತ್ತಿದ್ದರು. ಬಳಿಕ ಆ ಅಭ್ಯರ್ಥಿಗಳ ಹೆಸರಿನಲ್ಲಿ ಕಾಲೇಜುಗಳ ಬ್ಲಾಕ್ ಮಾಡಿಸಿ ಕೊನೆಗೆ ತಮಗೆ ಬೇಕಾದವರಿಗೆ ಸೀಟು ಹಂಚಿಕೆ ಮಾಡುವ ಕೃತ್ಯ ಎಸಗಿದ್ದರು.

ತನಿಖೆ ವೇಳೆ ಕೆಇಎ ಸೀಟ್ ಗಳ ಬ್ಲಾಕಿಂಗ್ ನ ಈ ಹಗರಣ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರೋದು ಪತ್ತೆಯಾಗಿದೆ. ಅಸಲಿಗೆ ಈ ಕಳ್ಳಾಟದ ಸಂಗತಿ ಪತ್ತೆಯಾಗಿ ಪೊಲೀಸ್ ಠಾಣೆಗೆ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿ ಪ್ರಕಾಶ್ ಕಡೂರಿನ ತಮ್ಮ ಜಮೀನಿನಲ್ಲಿ ಕೃತ್ಯಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳನ್ನು ಹೊಂದಿದ್ದ ಕೆಲ ಲ್ಯಾಪ್ ಗಳನ್ನು ಸುಟ್ಟು ಹಾಕಿದ್ದಾನೆ. ಸದ್ಯ ಅವೆಲ್ಲವನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲ, ಈ ಆರೋಪಿಗಳು ಕೆಇಎ ನ ಕಾಂಟ್ರ್ಯಾಕ್ಟ್ ಅಡಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಅವಿನಾಶ್ ಎಂಬಾತನ ಮೂಲಕ ಕೌನ್ಸೆಲಿಂಗ್ ಗೆ ಗೈರಾದ ಅರ್ಹ ಅಭ್ಯರ್ಥಿಗಳ ಪಟ್ಟಿ ಪಡೆಯುತ್ತಿದ್ದ ಸಂಗತಿ ಸಹ ಪಡೆದಿರೋದು ಪತ್ತೆಯಾಗಿದೆ.

ಬಂಧಿತ ಆರೋಪಿಗಳು ಕೆಇಎ ಸೀಟ್ ಬ್ಲಾಕಿಂಗ್ ಅಷ್ಟೇ ಅಲ್ಲದೇ ಈ ಹಿಂದೆ ನಡೆದ ನರ್ಸಿಂಗ್ ಸೀಟು ಹಂಚಿಕೆಯಲ್ಲೂ ಕಳ್ಳಾಟ ನಡೆಸಿದ್ದರು ಎನ್ನಲಾಗಿದೆ. ಸದ್ಯ ಪ್ರಕರಣ ಸಂಬಂಧ ಕೆಇಎ ಸಿಬ್ಬಂದಿ ಸಹಿತ ಕಳ್ಳಾಟಕ್ಕೆ ಭಾಗಿಯಾಗಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಸಲಿಗೆ ಈ ಕೃತ್ಯದಲ್ಲಿ ಪ್ರತಿಷ್ಠಿತ ಕಾಲೇಜುಗಳು ಸಹ ಭಾಗಿಯಾಗಿರೋದು ಪೊಲೀಸರ ತನಿಖೆ ವೇಳೆ ರಿವೀಲ್ ಆಗಿದ್ದು, ಶೀಘ್ರದಲ್ಲೇ ಆ ಕಾಲೇಜುಗಳಿಗೆ ಶಾಕ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Edited By : Suman K
PublicNext

PublicNext

04/12/2024 01:17 pm

Cinque Terre

11.88 K

Cinque Terre

0

ಸಂಬಂಧಿತ ಸುದ್ದಿ