ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನಕಲಿ ಮಾರಾಟಗಾರ, ನಕಲಿ ಗ್ರಾಹಕ - 'ಮೀಶೋ' ಕಂಪನಿಗೆ ವಂಚಿಸಿದ್ದ ಗುಜರಾತ್‌ ಮೂಲದ ಮೂವರು ಅರೆಸ್ಟ್!

ಬೆಂಗಳೂರು : ನಕಲಿ ಮಾರಾಟಗಾರರು ನಕಲಿ ಗ್ರಾಹಕರನ್ನ ಸೃಷ್ಟಿಸಿ ಮೀಶೋ ಕಂಪನಿಗೆ ವಂಚಿಸಿದ್ದ ಗುಜರಾತ್ ಮೂಲದ ಮೂವರನ್ನ ಸಿಸಿಬಿಯ ಸೈಬ‌ರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಉತ್ತಮ್ ಕುಮಾರ್, ಪಾರ್ಥ್ ಭಾಯ್ ಹಾಗೂ ಮೌಲಿಕ್ ಬಂಧಿತರು..

7 ತಿಂಗಳ ಅವಧಿಯಲ್ಲಿ ಒಟ್ಟು 5.50 ಕೋಟಿ ವಂಚನೆಯಾಗಿರುವುದರ ಕುರಿತು ಮೀಶೋ ಕಂಪನಿಯ ನೋಡಲ್ ಅಧಿಕಾರಿ ನೀಡಿದ್ದ ದೂರಿನನ್ವಯ ಸಿಸಿಬಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆನ್‌ಲೈನ್‌ ಇ-ಕಾಮರ್ಸ್ ವೇದಿಕೆಯಾಗಿರುವ ಮೀಶೋ ಆ್ಯಪ್‌ನ ಮೂಲಕ ಗ್ರಾಹಕರು ವಿವಿಧ ವಸ್ತುಗಳನ್ನು ಖರೀದಿಸಬಹುದು. ಈ ರೀತಿ ಖರೀದಿಸಿದ ವಸ್ತುಗಳಿಗೆ ಗ್ರಾಹಕರು ಆನ್‌ಲೈನ್ ಅಥವಾ ನಗದಿನ ಮೂಲಕ ಹಣ ಪಾವತಿಸಬಹುದು.

ಗುಜರಾತ್‌ನ ಸೂರತ್‌ನಲ್ಲಿ ಓಂ ಸಾಯಿ ಫ್ಯಾಷನ್ ಎಂಬ ಹೆಸರಿನಲ್ಲಿ ನಕಲಿ ಕಂಪನಿಯನ್ನ ತೆರೆದಿದ್ದ ಆರೋಪಿಗಳು, ಅದನ್ನ ಮಾರಾಟಗಾರ ಕಂಪನಿಯೆಂದು ಮೀಶೋದಲ್ಲಿ ರಿಜಿಸ್ಟರ್ ಮಾಡಿಸಿದ್ದರು. ನಂತರ ಮೀಶೋ ಆ್ಯಪ್ ಬಳಸಿ ತಾವೇ ಗ್ರಾಹಕರ ಸೋಗಿನಲ್ಲಿ ನಕಲಿ ಹೆಸರು ಮತ್ತು ವಿಳಾಸ ನೀಡಿ ಪ್ರತಿದಿನ ಸರಾಸರಿ 2000 ರಿಂದ 2500 ವಿವಿಧ ಪ್ರಾಡಕ್ಟ್‌ಗಳನ್ನ ಬುಕ್ ಮಾಡುತ್ತಿದ್ದರು.

ಆ ರೀತಿ ತಪ್ಪಾಗಿ ನೀಡಿದ ಗ್ರಾಹಕರ ವಿಳಾಸದಿಂದ ಪ್ರಾಡಕ್ಟ್‌ಗಳು ವಾಪಸ್ ಮಾರಾಟಗಾರ ಕಂಪನಿಯಾಗಿರುವ ಓಂ ಸಾಯಿ ಫ್ಯಾಷನ್‌ಗೆ ಹಿಂತಿರುಗುತ್ತಿದ್ದವು.ಹಾಗೆ ಹಿಂತಿರುಗಿದ ಪ್ರಾಡಕ್ಟ್ ಇರುವ ಪಾರ್ಸಲ್‌ನಲ್ಲಿರುವ ವಸ್ತುವನ್ನ ಬದಲಾಯಿಸುತ್ತಿದ್ದ ಆರೋಪಿಗಳು, 'ಪಾರ್ಸಲ್‌ನಲ್ಲಿದ್ದ ವಸ್ತು ಬದಲಾಗಿದೆ' ಎಂದು ವಿಡಿಯೋ ಮಾಡಿ \ಮೀಶೋ ಕಂಪನಿಯವರಿಗೆ ಕಳಿಸುತ್ತಿದ್ದರು. ಪ್ರಾಡಕ್ಟ್‌ಗಳ ಮೌಲ್ಯದಷ್ಟು ಹಣವನ್ನ ಮೀಶೋ ಕಂಪನಿಯಿಂದ ಪಡೆದುಕೊಳ್ಳುತ್ತಿದ್ದರು.

ಪ್ರಕರಣದ ತನಿಖೆ ಕೈಗೊಂಡ ಸೈಬರ್ ಕ್ರೈಂ ಪೊಲೀಸರು ಮೀಶೋ ಕಂಪನಿಯಿಂದ ಹಣ ವರ್ಗಾವಣೆಯಾದ ಬ್ಯಾಂಕ್‌ ಖಾತೆಯ ವಿವರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಹಲವು ಮೊಬೈಲ್ ಪೋನ್ ನಂಬರ್‌ಗಳ ಮಾಹಿತಿಯನ್ನು ಸಂಗ್ರಹಿಸಿ ಗುಜರಾತ್‌ಗೆ ತೆರಳಿ ಮೂವರು ಆರೋಪಿಗಳನ್ನ ಬಂಧಿಸಿದೆ.

ಆರೋಪಿಗಳು ಇದೇ ರೀತಿ ಒಟ್ಟು 5.50 ಕೋಟಿ ರೂಗಳನ್ನ ಇದುವರೆಗೂ ಆರೋಪಿಗಳು ವಿವಿಧ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು. ಈ ಹಿಂದೆ 2023ರಲ್ಲಿ ವೈಟ್ ಫೀಲ್ಡ್ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿಯೂ ಸಹ ಇದೇ ಆರೋಪಿಗಳು ಭಾಗಿಯಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

Edited By : Suman K
PublicNext

PublicNext

03/12/2024 05:40 pm

Cinque Terre

12.18 K

Cinque Terre

0

ಸಂಬಂಧಿತ ಸುದ್ದಿ