ಬೆಂಗಳೂರು: ಲೋಕಾಯುಕ್ತ ಕಚೇರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ವಿಚಾರಣೆಗೆ ಹಾಜರಾಗಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಕೇಸ್ ನಡಿ ಪ್ರಕರಣ ವಿಚಾರಣೆಗೆ ಸಚಿವ ಜಮೀರ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ಹಿಂದೆ ಐಎಂಎ ಕೇಸ್‌ನಲ್ಲಿ ಜಮೀರ್ ಮನೆ ಮೇಲೆ ಇಡಿ ಮೇಲೆ ದಾಳಿ ನಡೆಸಿತ್ತು.
ಈ ವೇಳೆ 2034% ನಷ್ಟು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಅಂತ ಅಂದಿನ ಎಸಿಬಿಗೆ ತನಿಖೆ ನಡೆಸುವಂತೆ ಇ.ಡಿ ಸೂಚಿಸಿತ್ತು. ಎಸಿಬಿ 2021ರಲ್ಲಿ ಜಮೀರ್ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಶುರುಮಾಡಿತ್ತು. ಎಸಿಬಿ ರದ್ದಾದ ಬಳಿಕ ಲೋಕಾಯುಕ್ತಕ್ಕೆ ಕೇಸ್ ವರ್ಗಾವಣೆಯಾಗಿದೆ. ಇದೀಗ ನಾಲ್ಕನೇ ಸಮನ್ಸ್ ಜಾರಿಯಾದ ಹಿನ್ನೆಲೆ ಜಮೀರ್ ವಿಚಾರಣೆಗೆ ಹಾಜರಾಗಿದ್ದಾರೆ. ಈ ಹಿಂದೆ ಮೂರು ಸಮನ್ಸ್ ಮಾಡಿದ್ರೂ ಜಮೀರ್ ವಿಚಾರಣೆಗೆ ಹಾಜರಾಗಿರಲಿಲ್ಲ.
PublicNext
03/12/2024 04:51 pm