ಬೆಂಗಳೂರು : ಯತ್ನಾಳ್ ವಿರುದ್ಧ 39 ಜಿಲ್ಲಾಧ್ಯಕ್ಷರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಗೆ ದೂರು ನೀಡಲು ನಿರ್ಧರಿಸಿದ್ದಾರೆ. ಸದ್ಯ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗಿಯಾಗಿರುವ ತರುಣ್ ಚುಗ್ ರನ್ನ ಭೇಟಿಯಾಗಿ ಯತ್ನಾಳ್ ನಡೆಯ ವಿರುದ್ಧ ದೂರು ನೀಡೋದಾಗಿ ಹೇಳಿದ್ದಾರೆ.
ಸಭೆ ಆರಂಭಕ್ಕೂ ಮುನ್ನ ಮಾತನಾಡಿದ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಅರುಣ್ ಕುಮಾರ್ ಪೂಜಾರ್ , ತರುಣ್ ಚುಗ್ ಗೆ ಬಿಜೆಪಿ ನಾವೆಲ್ಲ 39 ಜಿಲ್ಲಾಧ್ಯಕ್ಷರಿಂದ ಮನವಿ ಕೊಡ್ತೇವೆ. ಯತ್ನಾಳ್ ವಿರುದ್ಧ ಕ್ರಮ ಆಗಬೇಕು ಅಂತ ಒಟ್ಟಿಗೆ ಮನವಿ ಕೊಡ್ತೇವೆ ಎಂದರು.
ಯತ್ನಾಳ್ ಅವರು ಯಡಿಯೂರಪ್ಪ ಬಗ್ಗೆ, ವಿಜಯೇಂದ್ರ ಬಗ್ಗೆ ಮಾತಾಡೋ ರೀತಿ ಸರಿಯಲ್ಲ. ಯಡಿಯೂರಪ್ಪ ಪಕ್ಷ ಕಟ್ಟಿದವರು, ಪಕ್ಷ ಅಧಿಕಾರಕ್ಕೆ ತಂದವರು. ವಿಜಯೇಂದ್ರ ಬದಲಾವಣೆ ಸಾಧ್ಯವಿಲ್ಲ. ವರಿಷ್ಠರು ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದಾರೆ. ಕಳೆದೊಂದು ವರ್ಷ ವಿಜಯೇಂದ್ರ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ವಿಜಯೇಂದ್ರ ಬದಲಾವಣೆ ಆಗಲಿ ಅಂತ ಹೇಳಲು ಇವರ್ಯಾರು? ನಮ್ಮಂಥವರು ವಿಧಾನಸೌಧ ಮೆಟ್ಟಿಲೇರಲು ಯಡಿಯೂರಪ್ಪ ಅವರೇ ಕಾರಣ ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಅವರು ಯಾರೋ ಹೇಳ್ತಾರೆ ಅಂತ ವಿಜಯೇಂದ್ರರನ್ನು ಯಾಕೆ ಬದಲಾವಣೆ ಮಾಡ್ತಾರೆ? ಎಂದು ಪ್ರಶ್ನಿಸಿದ ಅವರು ವಿಜಯೇಂದ್ರ ಜೊತೆ ನಾವು ಇದ್ದೇವೆ. ಪಕ್ಷ ಉಳಿಯಬೇಕು, ಯಡಿಯೂರಪ್ಪ ಪಕ್ಷ ಕಟ್ಟಿ ಬೆಳೆಸಿದವರು. ಪಕ್ಷದ ವಿರುದ್ಧ ನಿಂತವರ ಮೇಲೆ ಕ್ರಮ ಆಗಲೇಬೇಕು ಎಂದರು.
PublicNext
03/12/2024 02:15 pm