ಬೆಂಗಳೂರು: ಶಿಕ್ಷಣ ಇಲಾಖೆಯಿಂದ ಗೆಳತಿಯೊಂದಿಗೆ ಹಾರೋಣ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಆದ್ರೆ ಈ ಕಾರ್ಯಕ್ರಮದ ಶೀರ್ಷಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಅಲ್ಲದೆ ಕೆಲವರು ಟ್ರೋಲ್ ಸಹ ಮಾಡಿದ್ದರು. ಈ ಕುರಿತು ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟ್ರೋಲ್ ಮಾಡಿದಕ್ಕೆ ತಲೆ ಕೆಡಿಸಿಕೊಳ್ಳಲ್ಲ ಎಂದರು.
ನಾನು ಟ್ರೋಲರ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ನಾವು ಮಕ್ಕಳಿಗೆ ಏನು ಒಳ್ಳೆಯದು ಕೊಟ್ಟೆವು ಎಂಬುದು ಮುಖ್ಯ. ರಾಷ್ಟ್ರಮಟ್ಟದಲ್ಲಿ ಸಹೇಲಿ ಕಿ ಉಡಾನ್, ಫ್ಲೈಯಿಂಗ್ ವಿತ್ ಫ್ರೆಂಡ್ ಎಂಬ ಹೆಸರು ಇದೆ ಅದನ್ನು ಕನ್ನಡಕ್ಕೆ ಅನುವಾದ ಮಾಡುವಾಗ, ಗೆಳತಿಯೊಂದಿಗೆ ಹಾರೋಣ, ಗೆಳತಿಯರೊಂದಿಗೆ ನಲಿಯೋಣ, ಗೆಳತಿಯೊಂದಿಗೆ ಆಡೋಣ ಹೀಗೆ ಹಲವಾರು ಹೆಸರುಗಳ ಬಗ್ಗೆ ಚರ್ಚೆ ಆಯಿತು. ಅಂತಿಮವಾಗಿ ಗೆಳತಿಯೊಂದಿಗೆ ಹಾರೋಣ ಎಂಬ ಹೆಸರಿಗೆ ಹೆಚ್ಚು ಒಲವು ವ್ಯಕ್ತವಾಯಿತು. ಹಾಗಾಗಿ ಈ ಹೆಸರನ್ನು ಅಂತಿಮ ಗೊಳಿಸಲಾಗಿದೆ. ಟ್ರೋಲರ್ ಗಳು ಏನೇ ನೆಗೆಟಿವ್ ಆಗಿ ಟೀಕೆ ಮಾಡಿದ್ರೂ ನಾನಂತೂ ತಲೆ ಕೆಡಿಸಿಕೊಳ್ಳಲ್ಲ. ಅದನ್ನ ಹುಳಿ ತರಹ ಎಸೆದುಬಿಡಬೇಕು ಎಂದರು.
PublicNext
04/12/2024 09:41 pm