ಬೆಂಗಳೂರು: ಬಗರ್ ಹುಕುಂ, ಆಶ್ರಯ ಸಮಿತಿಗಳ ಮಾದರಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಶಿಕ್ಷಣ ಸುಧಾರಣೆ ಸಮಿತಿಯನ್ನ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ತರಲಾಗುತ್ತಿದೆ ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಅವರು, ಶಿಕ್ಷಣ ಸುಧಾರಣೆ ಸಮಿತಿಯ ಈ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಸಮ್ಮತಿಸಿದ್ದಾರೆ. ಅಧಿವೇಶನದ ಬಳಿಕ ಜನವರಿಯಲ್ಲಿ ಸಮಿತಿಗಳು ಅಸ್ತಿತ್ವಕ್ಕೆ ಬರಲಿದೆ ಎಂದರು.
ವಿಧಾನಸಭೆ ಕ್ಷೇತ್ರಮಟ್ಟದಲ್ಲಿ ಶಿಕ್ಷಣ ಸುಧಾರಣೆ ಸಮಿತಿ ಎಂದೇ ಹೆಸರಿಸಲಾಗುವುದು. ಪ್ರಾಥಮಿಕ, ಪ್ರೌಢ ಹಾಗೂ ಪಿಯುವರೆಗೆ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆ, ಪಿಯು ಕಾಲೇಜುಗಳು ಸಮಿತಿ ವ್ಯಾಪ್ತಿಗೆ ಬರಲಿವೆ. ಶಾಸಕರ ಅಧ್ಯಕ್ಷತೆಯ ಸಮಿತಿಗಳು ಪ್ರತಿ ಎರಡು ಅಥವಾ ಮೂರು ತಿಂಗಳಿಗೊಮ್ಮೆ ಸಭೆ ಸೇರುವಂತೆ ಆಲೋಚಿಸಲಾಗಿದೆ ಎಂದರು.
ಈ ಸಮಿತಿ ಜವಾಬ್ದಾರಿ ಶಿಕ್ಷಣದ ಗುಣಮಟ್ಟ ಸುಧಾರಣೆ, ಆಡಳಿತದ ಮೇಲೆ ನಿಗಾ, ಆರ್ಥಿಕ ಹಾಗೂ ಭೌತಿಕ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಮೇಲ್ವಿಚಾರಣೆ ಸಮಿತಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
PublicNext
04/12/2024 09:00 pm