ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಲಿಂಗಾಧಾರಿತ ದೌರ್ಜನ್ಯ ನಿವಾರಿಸುವ ಅರಿವು ಶಿಬಿರ, ಏಡ್ಸ್ ದಿನಾಚರಣೆ

ಕೊಡಗು: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳೋದಯ ಮಹಿಳಾ ಒಕ್ಕೂಟ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ "ಲಿಂಗಾಧಾರಿತ ದೌರ್ಜನ್ಯ ನಿವಾರಿಸುವ ಅರಿವು ಶಿಬಿರ ಹಾಗೂ ಏಡ್ಸ್ ದಿನಾಚರಣೆ" ಕಾರ್ಯಕ್ರಮವು ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಒಡಿಪಿ ಸಂಸ್ಥೆಯ ಸಂಘದ ಮಹಿಳೆಯರಿಗೆ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಒಡಿಪಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಜಾಯ್ಸಿ ಮೇನೆಜರ್ಸ್ ಅವರು ಉದ್ಘಾಟಿಸಿ ಮಾತನಾಡಿ, ಒಡಿಪಿ ಸಂಘದ ಮುಖಾಂತರ ಮಹಿಳೆಯರ ಸಬಲೀಕರಣ ಹೊಂದಬೇಕು ಹಾಗೂ ಮಹಿಳೆಯರು ಲಿಂಗ ಸಮಾನತೆ ಸಾಧಿಸಬೇಕು. ಎಲ್ಲರೂ ಸಮಾನ ಎಂಬ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಆರೋಗ್ಯ ಇಲಾಖೆಯಿಂದ ಸಮುದಾಯ ಸುರಕ್ಷಧಿಕಾರಿಯವರಾದ ಜ್ಯೋತಿ ಅವರು ಎಚ್‍ಐವಿ ಏಡ್ಸ್ ಕುರಿತು ಜನರು ಜಾಗೃತರಾಗಬೇಕು ಹಾಗೂ ಈ ಸೋಂಕಿಗೆ ತುತ್ತಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು.

Edited By : Vijay Kumar
Kshetra Samachara

Kshetra Samachara

02/12/2024 09:35 pm

Cinque Terre

140

Cinque Terre

0

ಸಂಬಂಧಿತ ಸುದ್ದಿ