ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಬಿಟ್ಟಂಗಾಲ‌ ಗ್ರಾಪಂ ಕಚೇರಿಗೆ ಕನ್ನ- ನಗದು, ಕಂಪ್ಯೂಟರ್‌ ಮದರ್ ಬೋರ್ಡ್ ದೋಚಿದ ಕಳ್ಳರು

ಕೊಡಗು: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಹೆಚ್ಚಾಗುತ್ತಿದ್ದು, ಕತ್ತಲಾಗಿ ಬೆಳಗಾಗೋದ್ರೊಳಗೆ ಕಳ್ಳರು ತಮ್ಮ ಕೈಚಳಕ ತೋರಿ‌ ಎಸ್ಕೇಪ್ ಆಗುತ್ತಿದ್ದಾರೆ.

ಅದೇ ರೀತಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಎಂಟ್ರಿ ಕೊಟ್ಟ ಖದೀಮರು ಕಾರ್ಯಾಲಯದಲ್ಲಿ ಹಣ, ಕಂಪ್ಯೂಟರ್ ಮದರ್ ಬೋರ್ಡ್ ಹಾಗೂ ಸ್ಟ್ಯಾಂಪ್ ಎಗರಿಸಿ ಎಸ್ಕೇಪ್ ಆಗಿದ್ದಾರೆ‌.

ಕಳ್ಳತನಕ್ಕೂ ಮೊದಲು ಮುಖ್ಯ ರಸ್ತೆಯ ಬೀದಿದೀಪವನ್ನು ಆಫ್ ಮಾಡಿ, ಸಿಸಿ ಕ್ಯಾಮೆರಾಗಳನ್ನು ತಿರುಗಿಸಿ ಕಚೇರಿಯ ಬೀಗ ಮುರಿದು ಒಳನುಗ್ಗಿ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಧಾವಿಸಿದ್ದು, ಪರಿಶೀಲನೆ ನಡೆಸಿ ಮುಂದಿ‌ನ ಕ್ರಮ ಕೈಗೊಂಡಿದ್ದಾರೆ.

Edited By : Vinayak Patil
PublicNext

PublicNext

30/11/2024 08:44 pm

Cinque Terre

31.25 K

Cinque Terre

0

ಸಂಬಂಧಿತ ಸುದ್ದಿ