ಕೊಡಗು : ಕಾರಿನಲ್ಲಿ ಬಂದ ಖದೀಮರು ರಾತ್ರಿ ರಸ್ತೆಯಲ್ಲಿ ಮಲಗಿದ್ದ ಗೋವುಗಳನ್ನ ಅಪರಿಸುತ್ತಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಸುತ್ತ ಮುತ್ತ ನಡೆದಿದೆ.
ಕೊಡಗು ಜಿಲ್ಲೆಯಲ್ಲಿ ಕತ್ತಲಾದ್ರೆ ಸಾಕು ಅಂಗಡಿ ಮನೆ, ದೇವಸ್ಥಾನಗಳಿಗೆ ಕಳ್ಳರು ಕನ್ನ ಹಾಕುತ್ತಿದ್ದಾರೆ. ಇದರ ನಡುವೆ ಇನ್ನೂ ಕೆಲ ಖದೀಮರು ರಸ್ತೆಯಲ್ಲಿ ಮಲಗಿರೋ ಬೀಡಾಡಿ ದನಗಳನ್ನ ಅಪಹರಿಸುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಚೋರರು ಜಾನುವಾರುಗಳನ್ನ ಅಪಹರಿಸುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು ಕೂಡಲೆ ಜಾನುವಾರುಗಳನ್ನ ಅಪಹರಿಸುತ್ತಿರುವುವರ ಬಗ್ಗೆ ಎಚ್ಚರ ವಹಿಸ ಬೇಕು ಇಲ್ಲವಾದಲ್ಲಿ ರೈತರು ಸಾಕಿರುವ ಗೋವುಗಳನ್ನ ಕೊಟ್ಟಿಗೆಯಿಂದಲೇ ಅಪಹರಿಸುವ ದಿನಗಳು ದೂರ ಇಲ್ಲವೆಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
PublicNext
02/12/2024 05:29 pm