ಕೊಡಗು: ಕೊಡಗು ಜಿಲ್ಲೆ ನಾಪೋಕ್ಲುವಿನ ಖಾಸಗಿ ರೆಸಾರ್ಟ್‌ನಲ್ಲಿ ಕುಟುಂಬ ಸದಸ್ಯರೆಲ್ಲರೂ ತಂಗಿದ್ದಾಗ ನವಂಬರ್ 2 ರಂದು ನಮ್ಮ ಮೇಲೆ ರೆಸಾರ್ಟಿನ ಮಾಲೀಕ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ವಿನಲ್ ಜೈನ್ ಎಂಬುವರು ಇ -ಮೇಲ್ ಮೂಲಕ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಮೂವರು ದಂಪತಿ ಮತ್ತು ಐವರು ಮಕ್ಕಳ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಘಟನೆ ನಡೆದ 25 ದಿನಗಳ ನಂತರ ವಿಡಿಯೋ ಸಮೇತ ಸಲ್ಲಿಸಲಾಗಿರುವ ದೂರಿನಲ್ಲಿ ಆರೋಪಿಸಲಾಗಿದೆ. ಹಲ್ಲೆ ಮಾಡಿರುವ ರೆಸಾರ್ಟ್ ಮಾಲೀಕ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುವಂತೆ ದೂರುದಾರರು ಒತ್ತಾಯಿಸಿದ್ದಾರೆ.
Kshetra Samachara
29/11/2024 04:14 pm