ಚಿಕ್ಕಮಗಳೂರು: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆನೆಗಳು ಬೀಡು ಬಿಟ್ಟು ಒಂದು ತಿಂಗಳೆ ಕಳೆದಿದ್ದು ಗ್ರಾಮಗಳಲ್ಲಿ ನೂರಾರು ಎಕರೆ ಅಡಿಕೆ, ಬಾಳೆ, ಭತ್ತ, ಶುಂಠಿ ಫಸಲು ಸಂಪೂರ್ಣ ನಾಶವಾಗಿದೆ. ಆನೆಗಳು ಬೆಳೆಗಳನ್ನು ತಿನ್ನುವುದೇ ಅಲ್ಲದೆ ತುಳಿದು ನಾಶಪಡಿಸಿವೆ. ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಜಿಲ್ಲೆಗೆ ಮಂತ್ರಿಯೋ ಇಲ್ಲ ಅವರ ತೋಟಕ್ಕೆ ಮಂತ್ರಿಯೋ, ಇಂತಹ ಮಂತ್ರಿ ನಮಗೆ ಬೇಕಾ..?. ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ ಕಲ್ಮಡಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕರುಗ ಈ ನಮಗೂ ಸಮಸ್ಯೆಗಳಿಗೂ ಸಂಬಂಧವೇ ಇಲ್ಲ ಎಂಬಂತೆ, ವರ್ತಿಸುತ್ತಿದ್ದಾರೆ ಶಾಸಕ ತಮ್ಮಯ್ಯ ಕಾಟಾಚಾರಕ್ಕೆ ಆನೆ ದಾಳಿ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಕಾರ್ಯಕ್ರಮಗಳಿಗೆ ಹಾಗೂ ಅವರ ತೋಟಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಕಾಡಾನೆಗಳು ಇರುವ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಉಡಾಫೆ ಉತ್ತರ ಕೊಡುತ್ತಿದ್ದು ಡಿಎಫ್ಓ ಆಗಲಿ, ಅರಣ್ಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
Kshetra Samachara
01/12/2024 02:32 pm