ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಸರ್ಕಾರಿ ನೌಕರರ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಹಸ್ತಕ್ಷೇಪ - ದೇವೇಂದ್ರ ಆರೋಪ

ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು ಮತ ಹಾಕುವ ನಿರ್ದೇಶಕರುಗಳನ್ನು ಮನೆಗೆ ಕರೆಸಿ ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ದೇವೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ನಿರ್ದೇಶಕರುಗಳಿಗೆ ಹಣ,ಬೆಳ್ಳಿ ಬಟ್ಟಲು ಆಮಿಷ ಓಡುತ್ತಿದ್ದು, ರೆಸಾರ್ಟ್ ಗೆ ಬಂದು ವಾಸ್ತವ್ಯ ಹೂಡುವಂತೆ ಒತ್ತಡ ಹೇರುತ್ತಿದ್ದಾರೆ.

ಇಂತಹ ನೀಚ ಕೃತ್ಯವನ್ನು ಭೋಜೇಗೌಡರು ಮಾಡಬಾರದು ಎಂದಿರುವ ದೇವೇಂದ್ರ, ನೌಕರರ ಸಂಘದ ಚುನಾವಣೆಯ ವಿಷಯವನ್ನು ಮತ್ತೋರ್ವ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೇಮಂತ್ ಕುಮಾರ್ ಸಾರ್ವಜನಿಕ ಗೊಳಿಸುತ್ತಿರುವುದು ದುರಂತ ಇದು ಸಂಘಕ್ಕೆ ವಿನಾಶಕಾರಿ, ಕಂದಾಯ ನೌಕರರ ಸಂಘವನ್ನು ವರ್ಷಾನುಗಟ್ಟಲೆ ಸಭೆ ನಡೆಸದೆ, ಯಾವುದೇ ಚಟುವಟಿಕೆಗಳನ್ನು ನಡೆಸದೆ ಶಾಶ್ವತವಾಗಿ ಮುಚ್ಚಿರುವ ಇವರ ಅಹಂಕಾರದಿಂದಲೇ ಮತದಾರರ ಪಟ್ಟಿಯಲ್ಲಿ ಹಲವರ ಹೆಸರು ಕೈ ಬಿಡಲಾಗಿತ್ತು. ನಾನು ಭೋಜೇಗೌಡರ, ಬೆದರಿಕೆಗೆ ಹೆದರುವುದಿಲ್ಲ., ನಮಗೆ ಯಾವುದೇ ಭಯವೂ ಇಲ್ಲ, ನಾಳೆ ನಡೆಯಲಿರುವ ಚುನಾವಣೆ ನಿಸ್ಪಕ್ಷಪಾತವಾಗಿ, ಸುಸೂತ್ರವಾಗಿ, ಪಾರದರ್ಶಕವಾಗಿ ನಡೆಯಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದರು.

Edited By : PublicNext Desk
Kshetra Samachara

Kshetra Samachara

03/12/2024 05:45 pm

Cinque Terre

1.28 K

Cinque Terre

0

ಸಂಬಂಧಿತ ಸುದ್ದಿ