ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧಾನ ಪರಿಷತ್‌ ಸದಸ್ಯ ಎಸ್.ಎಲ್. ಭೋಜೇಗೌಡ ವಿರುದ್ಧ ಚುನಾವಣಾಧಿಕಾರಿಗೆ ದೂರು

ಚಿಕ್ಕಮಗಳೂರು : ಸರ್ಕಾರಿ ನೌಕರರ ಸಂಘದ ಚುನಾವಣೆ ಹಿನ್ನೆಲೆ ವಿಧಾನ ಪರಿಷತ್‌ ಸದಸ್ಯ ಎಸ್.ಎಲ್. ಭೋಜೇಗೌಡ ವಿರುದ್ಧ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ದೇವೇಂದ್ರಪ್ಪ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

ನಮ್ಮ ಚುನಾವಣೆಯನ್ನ ನಾವೇ ಮಾಡಿಕೊಳ್ಳುತ್ತೇವೆ.‌ ನೌಕರರ ಸಂಘದ ಚುನಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ಬೇಡ. ಆದರೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು, ನೌಕರರ ಸಂಘದ ಚುನಾವಣೆಯಲ್ಲಿ ಪಾಲ್ಗೊಂಡು ನಿರ್ದೇಶಿತ ಸದಸ್ಯರಿಗೆ ನಿರ್ಭಯವಾಗಿ ಮತದಾನ ಮಾಡಲು ಬಿಡುತ್ತಿಲ್ಲ ಎಂದು ದೂರಿದ್ದಾರೆ. ಕೆಲಸದ ಅವಧಿಯಲ್ಲಿ ನಿರ್ದೇಶಕರನ್ನ ಪದೇ-ಪದೇ ಮನೆಗೆ ಕರೆಸಿ ಇಂತವರಿಗೆ ಮತ ಹಾಕಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ.

ರೆಸಾರ್ಟ್ ಗಳಿಗೆ ಕರೆಯುತ್ತಿದ್ದಾರೆ. ನಾವು ಹೇಳಿದವರಿಗೆ ಮತ ಹಾಕಬೇಕು ಎಂದು ಆಣೆ-ಪ್ರಮಾಣ ಮಾಡಲು ಬಲವಂತ ಮಾಡುತ್ತಿದ್ದಾರೆ. ಎರಡು ದಿನಗಳ ಕಾಲ ನಾವು ಹೇಳಿದ ರೆಸಾರ್ಟ್ ನಲ್ಲಿ ಉಳಿಯಬೇಕು ಹಾಗೂ ನಾವು ಹೇಳಿದ ಅಭ್ಯರ್ಥಿಗೆ ಮತ ಹಾಕಬೇಕೆಂದು ಬೆದರಿಕೆ ಒಡ್ಡುತ್ತಿದ್ದಾರೆ. ಹಾಗಾಗಿ, ನೌಕರರು ನಿರ್ಭಯವಾಗಿ ಮತದಾನ ಮಾಡಲು ಆಗದಂತಹಾ ವಾತಾವರಣ ಸೃಷ್ಠಿಯಾಗಿದೆ. ನೌಕರರ ಸಂಘದ ಚುನಾವಣೆ ರಾಜಕೀಯ ಮುಕ್ತವಾಗಿ ಪಾರದರ್ಶಕವಾಗಿ ನಡೆಸಿಕೊಡಬೇಕಾಗಿ ಮನವಿ ಮಾಡಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ದೇವೇಂದ್ರಪ್ಪ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.

Edited By : Nagesh Gaonkar
PublicNext

PublicNext

01/12/2024 06:27 pm

Cinque Terre

18.27 K

Cinque Terre

0

ಸಂಬಂಧಿತ ಸುದ್ದಿ