ಮೇಷ ರಾಶಿ: ನಿಮ್ಮ ಆತ್ಮವಿಶ್ವಾಸದಿಂದ ಎಲ್ಲಾ ಕೆಲಸಗಳಲ್ಲಿ ಜಯ ನಿಮ್ಮದಾಗುತ್ತದೆ. ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಸಿಗುವ ಸೂಚನೆಯಿದೆ. ನಿಮ್ಮ ನಿಮ್ಮ ಮಟ್ಟಕ್ಕೆ ಅನುಗುಣವಾಗಿ ನಿಮ್ಮ ವರ್ಚಸ್ಸು ಹೆಚ್ಚಾಗಬಹುದು.
ವೃಷಭ: ಇಂದು ಯಾವುದೇ ಕೆಲಸದಲ್ಲಿ ನಿಮ್ಮ ಮನಸ್ಸನ್ನ ಕೇಂದ್ರೀಕರಿಸಲು ಆಗುವುದಿಲ್ಲ. ತಲೆ ನೋವು ಅಥವಾ ಮೈಗ್ರೇನ್ ಸಮಸ್ಯೆ ಕಾಡಬಹುದು. ಹಳೆಯ ಸಂಪರ್ಕದಿಂದ ವ್ಯವಹಾರದಲ್ಲಿ ತೊಂದರೆಯಾಗಬಹುದು. ಧೂಳು ಅಥವಾ ಸೂರ್ಯನ ಕಿರಣಗಳಿಂದ ಸಮಸ್ಯೆಯಾಗಬಹುದು.
ಮಿಥುನ: ಸಮಸ್ಯೆಗಳು ಅಥವಾ ವಿವಾದಿತ ವಿಚಾರಗಳು ಇಂದು ಬಗೆ ಹರಿಯಬಹುದು. ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಪ್ರಯತ್ನ ಮಾಡುವವರಿಗೆ ಅನುಕೂಲವಿದೆ. ಪ್ರೇಮಿಗಳಿಗೆ ಬಹಳ ಒಳ್ಳೆಯ ದಿನ ಆದರೆ ಸುಳ್ಳನ್ನು ಹೇಳಬೇಡಿ.
ಕಟಕ: ಸಂಶೋಧಕರಿಗೆ, ವಿಜ್ಞಾನಿಗಳಿಗೆ ಬಹಳ ಉತ್ತಮವಾದ ದಿನ. ಕಾನೂನಿನ ವಿಚಾರದಲ್ಲಿ ಹಲವಾರು ತೊಡಕಗಳನ್ನ ಕಾಣಬಹುದು. ಪ್ರಕೃತಿ ವೀಕ್ಷಣೆ ಅಥವಾ ಪ್ರಾಣಿ ಸಂಕುಲ ವೀಕ್ಷಣೆ ಮಾಡುವ ಯೋಗವಿದೆ.
ಸಿಂಹ: ಬೇರೆಯವರ ಭಾವನೆ, ಮನಸ್ಥಿತಿಯನ್ನ ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿ. ಮೇಲಾಧಿಕಾರಿಗಳ ವರ್ತನೆ ಮನಸ್ಸಿನ ಮೇಲೆ ಸ್ವಲ್ಪ ನೋವನ್ನ ಉಂಟು ಮಾಡಬಹುದು. ಸಹೋದ್ಯೋಗಿಗಳಿಗೆ ನಿಮ್ಮ ಬಗ್ಗೆ ಕನಿಕರ ಇರುತ್ತದೆ ಆದರೆ ಪ್ರಯೋಜನವಿಲ್ಲ.
ಕನ್ಯಾ: ನಿಮ್ಮ ಅಸೂಯ ಪರವಾದ ಗುಣಗಳನ್ನು ದೂರ ಮಾಡಿಕೊಳ್ಳಿ. ಹಿತೈಷಿಗಳು, ಸ್ನೇಹಿತರು,ಆತ್ಮೀಯರು, ಬಂಧುಗಳು, ನಿಮ್ಮ ನ್ಯೂನತೆಯನ್ನು ತಿಳಿಸುತ್ತಿರುತ್ತಾರೆ. ಕಾರ್ಯಕ್ಷೇತ್ರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಲಿದೆ. ನಿಮ್ಮನ್ನು ಎಲ್ಲರೂ ಬೇರೆ ರೀತಿಯಲ್ಲಿ ನೋಡುತ್ತಾರೆ.
ತುಲಾ: ವ್ಯಾವಹಾರಿಕವಾಗಿ ಉತ್ತಮವಾದ ಫಲವನ್ನು ಕಾಣುತ್ತೀರಿ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಬೇಡಿ. ಪರನಿಂದೆ ಆತ್ಮ ಪ್ರಶಂಸೆ ಒಳ್ಳೆಯದಲ್ಲ. ಹಣ್ಣು ವ್ಯಾಪಾರ ಮಾಡುವವರಿಗೆ ಲಾಭವಿದೆ.
ವೃಶ್ಚಿಕ: ಆರೋಗ್ಯದ ಬಗ್ಗೆ ಗಮನ ಕೊಡಿ. ಕಡಿಮೆ ರಕ್ತದೊತ್ತಡ ಇರುವವರು ಜಾಗ್ರತೆವಹಿಸಿ. ಬೇರೆಯವರ ಆಲೋಚನೆ, ಮನಸ್ಥಿತಿ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿ. ನಿರ್ದಿಷ್ಟವಾದ ವಿಚಾರಕ್ಕೆ ಸ್ನೇಹಿತರ ಮಧ್ಯ ಜಗಳಕ್ಕೆ ಅವಕಾಶವಿದೆ.
ಧನಸ್ಸು: ಕಾರ್ಯಕ್ಷೇತ್ರದಲ್ಲಿ ದಕ್ಷತೆಯನ್ನು ತೋರಿಸುತ್ತೀರಿ. ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ. ನಿಮ್ಮ ಗುರಿಯ ಬಗ್ಗೆ ನಿಮಗೆ ಆಶ್ಚರ್ಯವಾಗಲಿದೆ. ನಿಮ್ಮ ಪ್ರಗತಿ ನಿಮ್ಮ ಪೂರ್ವಜನ್ಮದ ಸುಕೃತ ಅಂತ ಭಾವಿಸಿ.
ಮಕರ: ನಿಮ್ಮ ತಂದೆ-ತಾಯಿ ಮಾಡಿದ ಪುಣ್ಯದ ಫಲ ನಿಮಗಿದೆ. ನೌಕರಿಯಲ್ಲಿ ವಿದ್ಯಾಭ್ಯಾಸದಲ್ಲಿ ಅತಿಯಾದ ಆಯಾಸವನ್ನು ಮಾಡಿಕೊಳ್ಳುತ್ತೀರಿ. ವ್ಯವಹಾರಕ್ಕೋಸ್ಕರ ಸಾಲವನ್ನು ಮಾಡಬೇಡಿ. ಹಳೆಯ ಸಾಲವನ್ನು ಮರುಪಾವತಿ ಮಾಡಬೇಕಾದರೆ ತೊಂದರೆಯಾಗಬಹುದು.
ಕುಂಭ: ಚಿಕ್ಕ ವಯಸ್ಸಿನ ಮಕ್ಕಳಿಗೆ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು. ಕೆಲಸದಲ್ಲಿ ಗುಣಮಟ್ಟವನ್ನು ಸುಧಾರಿಸಿಕೊಳ್ಳಿ. ಮೇಲಾಧಿಕಾರಿಗಳ, ಮನೆಯ ಸದಸ್ಯರ ಜೊತೆಯಲ್ಲಿ ಅನ್ಯೋನ್ಯತೆ ಇರಲಿ. ಈ ದಿನ ಸಂದರ್ಶನವಿದ್ದರೆ ಶುಭವಿದೆ.
ಮೀನ: ಸಾಮಾಜಿಕ ಕ್ಷೇತ್ರದ ಆಸಕ್ತಿ ನಿಮಗೆ ಕಾರ್ಯಗತವಾಗಿ ಫಲವನ್ನು ಕೊಡುವುದಿಲ್ಲ. ಹಣದ ಖರ್ಚಿಗೆ ಹಿನ್ನಡೆ, ಅವಮಾನ ಆಗಬಹುದು. ಕುಟುಂಬದಲ್ಲಿ ಚಿಕ್ಕ ಮಕ್ಕಳ ಜೊತೆಯಲ್ಲಿ ಬಹಳ ಸೌಹಾರ್ದಯುತವಾಗಿ ವರ್ತಿಸಿ. ಮಗು ನಿಮ್ಮಿಂದ ಅಸಂತೋಷವನ್ನು ಹೊಂದಿದರೆ ನಿಮಗೆ ಅವಮಾನವಾಗಬಹುದು
PublicNext
30/11/2024 07:52 am