ಮೇಷ ರಾಶಿ: ಹಣಕಾಸಿನ ವಿಚಾರದಲ್ಲಿ ಚೆನ್ನಾಗಿರುವ ದಿನ. ಎಲ್ಲ ವಿಚಾರದಲ್ಲಿ ಲಾಭ ಹೆಚ್ಚಾಗುವ ದಿನ. ವಿದ್ಯಾರ್ಥಿಗಳು ಅಧ್ಯಯನದ ದೃಷ್ಟಿಯಿಂದ ತುಂಬಾ ಗಂಭೀರ ಚಿಂತನೆಗಳನ್ನ ನಡೆಸಬೇಕು. ಪದವೀಧರರಿಗೆ ಉತ್ತಮ ನೌಕರಿಗೆ ಅವಕಾಶವಿದೆ.
ವೃಷಭ: ಮಾನಸಿಕವಾಗಿ ತುಂಬಾ ಬೇಸರವಾಗುವ ದಿನ. ಯಾರನ್ನು ಕೂಡ ಪರಿಪೂರ್ಣವಾಗಿ ತಿಳಿದುಕೊಳ್ಳದೆ ನಂಬಬೇಡಿ ವಂಚನೆಗೆ ಒಳಗಾಗಬಹುದು. ಸ್ನೇಹಿತರು, ಸಹೋದ್ಯೋಗಿಗಳು ನಿಮಗೆ ಮೋಸ ಮಾಡಬಹುದು ಎಚ್ಚರ.
ಮಿಥುನ: ನಿಮ್ಮ ಕುಟುಂಬ ಸದಸ್ಯರ ನಡುವಳಿಕೆಯಿಂದ ನಿಮ್ಮ ಪರಿವಾರದವರೆಲ್ಲರೂ ನಿಮ್ಮನ್ನ ಮೆಚ್ಚಿಕೊಳ್ಳುತ್ತಾರೆ. ನಿಮ್ಮ ಚುರುಕುತನ, ಬುದ್ಧಿವಂತಿಕೆ ನಿಮಗೆ ಗೌರವವನ್ನು ತರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ರಾಜಕಾರಣಿಗಳಿಗೆ ಉತ್ತಮವಾದ ದಿನ.
ಕಟಕ: ಇಂದು ನಿಮ್ಮ ಬಗ್ಗೆ ನಿಮಗೆ ಗಟ್ಟಿಯಾದ, ದೃಢವಾದ ನಂಬಿಕೆ ಇರಬೇಕು. ಹಿರಿಯರ ಬಗ್ಗೆ ಅಗತ್ಯವಾದ ಸೇವಾ ಮನೋಭಾವನೆ ಇರಬೇಕಾದ ದಿನ. ಸಮಾಜದಲ್ಲಿ ವಿಶೇಷವಾದ ಗೌರವಕ್ಕೆ ಪಾತ್ರರಾಗುತ್ತೀರಿ.
ಸಿಂಹ: ಬಹಳ ವಿರಾಮವಾಗಿ ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಬೇಕೆಂಬ ಮನಸ್ಸು ಬರಬಹುದು. ಆದರೆ ಕೆಲಸದ ಒತ್ತಡ ನಿಮಗೆ ಅವಕಾಶ ಮಾಡಿಕೊಡುವುದಿಲ್ಲ. ಆಸ್ತಿ ವಿಚಾರವಾಗಿ ಸ್ವಲ್ಪ ಮಾತುಕತೆಗಳು ನಡೆಯಬಹುದು.
ಕನ್ಯಾ: ಯಾವುದೇ ಸೂಚನೆಗಳಿಲ್ಲದೆ ತತಕ್ಷಣ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು. ತತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಿ. ಆರೋಗ್ಯ ಸಮಸ್ಯೆಗಳಿಗೆ ದೇವರಿಗೆ ಹರಕೆ ಮಾಡಿಕೊಂಡಿದ್ದರೆ ತಕ್ಷಣ ತೀರಿಸಿ.
ತುಲಾ: ಯೋಗ್ಯವಲ್ಲದ ಕೆಲಸಗಳಲ್ಲಿ ಭಾಗವಹಿಸಬೇಡಿ. ಇಂದು ಯೋಚನೆ ಮಾಡಿ ಮಾತನಾಡಿ. ನಿಮ್ಮ ಹಣವನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿ. ಬೇರೆ ಬೇರೆ ಕೆಲಸಗಳಿಗೆ ಇಂದು ಪ್ರಯತ್ನ ಮಾಡಬಹುದು. ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ಕೆಲಸದಲ್ಲಿ ನಿಯಮಗಳು ಹೆಚ್ಚಾಗಬಹುದು.
ವೃಶ್ಚಿಕ: ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದಿಲ್ಲ ಬೇಸರವಾಗಬಹುದು. ವ್ಯಾಪಾರಸ್ಥರು ಸರಿಯಾದ ಶಿಸ್ತನ್ನು ಅನುಸರಿಸದೆ ತೊಂದರೆಗೆ ಒಳಗಾಗಬಹುದು. ಅಸ್ತಮಾ ರೋಗಿಗಳಿಗೆ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಚ್ಚರ.
ಧನಸ್ಸು: ನೀವು ಮಾಡುವ ಉದ್ಯೋಗ, ವೃತ್ತಿ, ವ್ಯವಹಾರ, ವ್ಯಾಪಾರದಲ್ಲಿ ನೆಮ್ಮದಿ ಸಿಗಬಹುದು. ನಿಮ್ಮ ಸಂಬಳ, ಆದಾಯ ಹೆಚ್ಚಾಗುವ ದಿನ. ಪ್ರೇಮಿಗಳು ಬಹಳ ಜಾಗೃತರಾಗಿರಬೇಕಾದ ದಿನ ತೊಂದರೆ ಆಗಬಹುದು.
ಮಕರ: ವ್ಯವಹಾರಿಕ ಅಥವಾ ವೈಯಕ್ತಿಕವಾಗಿ ಯಾರ ಮೇಲೆ ಅನುಮಾನಗಳಿದ್ದರೆ ಅಂತಹ ವ್ಯಕ್ತಿಗಳಿಂದ ದೂರವಿರಿ. ಕಷ್ಟಪಟ್ಟು ಮಾಡಿದ ಕೆಲಸಗಳಲ್ಲಿ ಯಾವುದೇ ಕಾರಣಕ್ಕೂ ರಾಜಿಯನ್ನ ಮಾಡಿಕೊಳ್ಳಬೇಡಿ. ಮನೆಯಲ್ಲಿ ಅನೇಕ ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು.
ಕುಂಭ: ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುವ ದಿನ. ಹೊಸ ವ್ಯಾಪಾರ, ವ್ಯವಹಾರಗಳಲ್ಲಿ ಶುಭ ಕಾಣುವ ಅವಕಾಶವಿದೆ. ನಿಮಗಿರುವ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸಿ ಜಯಶೀಲರಾಗುವ ಯೋಗವಿದೆ. ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು.
ಮೀನ: ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಅಡೆತಡೆಗಳು ನಿವಾರಣೆಯಾಗುತ್ತವೆ. ವ್ಯಾಪಾರ, ವ್ಯವಹಾರದಲ್ಲಿ ಅಧಿಕವಾದ ಲಾಭಕ್ಕೆ ಅವಕಾಶವಿದೆ
ಹಲವಾರು ಜನ ನಿಮಗೆ ಧನ್ಯವಾದಗಳು ಹೇಳುತ್ತಾರೆ.
PublicNext
29/11/2024 07:33 am