ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿಜೆಪಿ ಪಕ್ಷದ್ದು ಇಬ್ಬಗೆಯ ನೀತಿ : ಕೆಪಿಸಿಸಿ ಜಿಲ್ಲಾ ವಕ್ತಾರ ಶಂಬು ಶೆಟ್ಟಿ

ಕಾರವಾರ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ವಕ್ಫ್ ಮಂಡಳಿಗೆ ಹೆಚ್ಚಿನ ಪ್ರೊತ್ಸಾಹ ನೀಡುತ್ತಿದೆ ಎಂದು ಅಪಾದಿಸಿ ಬಿಜೆಪಿಯು ಮಹಾರಾಷ್ಟ್ರದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ವಕ್ಫ್ ಮಂಡಳಿಗೆ ಹತ್ತು ಕೋಟಿ ಅನುದಾನ ನೀಡಿ ಇಬ್ಬಗೆಯ ನೀತಿಯನ್ನು ಪ್ರತಿಪಾದಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಚೆಗೆ ಕರ್ನಾಟಕದ ಕಾಂಗ್ರೆಸ್ ಸರಕಾರ ವಕ್ಫ್ ಮಂಡಳಿ ಆಸ್ತಿ ವಿಚಾರದಲ್ಲಿ ರೈತರಿಗೆ ಅನಗತ್ಯ ನೋಟೀಸ್ ಜಾರಿ ಮಾಡುತ್ತಿದೆ ಎಂದು ಬಿಜೆಪಿ ಅಪಾದಿಸಿದೆ. ಬಿಜೆಪಿ ಸರಕಾರದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಮತ್ತು ಬಿ ಎಸ್ ಯೆಡಿಯೂರಪ್ಪ ಅವರ ಅಧಿಯಲ್ಲಿ ಅತೀ ಹೆಚ್ಚು ನೋಟೀಸ್ ಜಾರಿ ಮಾಡಲಾಗಿತ್ತು.

ಬಿಜೆಪಿ ಮಂತ್ರಿ ಕುಮಾರ ಬಂಗಾರಪ್ಪ ನೇತೃತ್ವದಲ್ಲಿ ಈ ಕುರಿತು ಸಮಿತಿ ನಿರ್ಮಿಸಿದ್ದು, ಸಮಿತಿಯು ತನ್ನ ವರದಿಯನ್ನು ಕೂಡಾ ವಿಧಾನ ಮಂಡಲದಲ್ಲಿ ಸಲ್ಲಿಸಿತ್ತು. ಹೀಗಿದ್ದರೂ ಬಿಜೆಪಿ ಈಗ ರಾಜ್ಯವ್ಯಾಪಿ ಹೋರಾಟ ಆರಂಭಿಸಿ ಜನರಲ್ಲಿ ಸುಳ್ಳನ್ನು ಸತ್ಯವನ್ನಾಗಿಸುತ್ತದೆ. ಇದೀಗ ಮಹಾರಾಷ್ಟçದಲ್ಲಿ ವಕ್ಫ್ ಮಂಡಳಿಗೆ ಹತ್ತು ಕೋಟಿ ರೂ. ಅನುಧಾನ ನೀಡಿ ಇಬ್ಬಗೆಯ ನೀತಿ ಪ್ರತಿಪಾದಿಸುತ್ತಿದೆ ಎಂದು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

29/11/2024 07:50 pm

Cinque Terre

3.66 K

Cinque Terre

0

ಸಂಬಂಧಿತ ಸುದ್ದಿ