ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅನಾಥಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಶಾಸಕರ ಪುತ್ರ ಅಶ್ವಿನ್

ಅನಾಥರ ಸೇವೆಗೆ ಸಹಾಯ  ಜನ್ಮದಿನಾಚರಣೆ ಆಚರಿಸಿಕೊಂಡ ಅಶ್ವಿನ್ ಭೀಮಣ್ಣ ನಾಯ್ಕ 

ಸಿದ್ದಾಪುರ : ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ರವರ ಪುತ್ರ ಉದ್ಯಮಿ ಅಶ್ವಿನ್ ಭೀಮಣ್ಣ ನಾಯ್ಕ ರವರು ತಮ್ಮ ಜನ್ಮದಿನದ ಪ್ರಯುಕ್ತ ಸಿದ್ದಾಪುರದ ಮುಗದುರಿನಲ್ಲಿರುವ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮಕ್ಕೆ ಅಭಿಮಾನಿ ಬಳಗದೊಂದಿಗೆ ಆಗಮಿಸಿ ಕೇಕ್ ಕತ್ತರಿಸಿ ಆಶ್ರಮ ವಾಸಿಗಳಿಗೆ ಕೇಕ್ ಹಾಗೂ ಆಹಾರ ಸಾಮಗ್ರಿಗಳನ್ನು ಹಾಗೂ ಆರ್ಥಿಕ ಸಹಾಯ ನೀಡಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.

 ಆಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕರವರ  ಅನಾಥರ  ಸೇವೆಯನ್ನು ಮೆಚ್ಚಿಕೊಂಡು ಯಾವತ್ತು ಆಶ್ರಮದ ಸೇವೆಗೆ ತಮ್ಮ ಬೆಂಬಲವಿದ್ದು ತಾವು ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ಸೇವೆಯ ಜೊತೆ ಕೈ ಜೋಡಿಸುವ ಭರವಸೆ ನೀಡಿದರು. ಆಶ್ರಮದ ವತಿಯಿಂದ ಅಶ್ವಿನ್  ಅವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.

          

Edited By : PublicNext Desk
Kshetra Samachara

Kshetra Samachara

28/11/2024 05:57 am

Cinque Terre

133.12 K

Cinque Terre

0

ಸಂಬಂಧಿತ ಸುದ್ದಿ