ಚಿಕ್ಕಮಗಳೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಡೀ ತಿಂಗಳು ಜಿಲ್ಲೆಯಾದ್ಯಂತ ವಿವಿಧ ಕನ್ನಡಪರ ಸಂಘಟನೆಗಳು ಆಟೋ ಚಾಲಕರು ವಿಶಿಷ್ಟವಾಗಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದು ನಗರದ ಜೈ ಕನ್ನಡಾಂಬೆ ಬಳಗದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಇಂದಾವರ ಸಮೀಪದ ಅನ್ನಪೂರ್ಣ ವೃದ್ದಾಶ್ರಮದಲ್ಲಿರುವವರಿಗೆ ಅನ್ನದಾನ ಮಾಡಲಾಯಿತು. ಜೈಕನ್ನಡಾಂಬೆ ಬಳಗವು ಸ್ಥಾಪನೆಗೊಂಡು ಹತ್ತು ವರ್ಷ ಕಳೆದಿದ್ದು ಕನ್ನಡ ರಾಜ್ಯೋತ್ಸವ ಸೇರಿದಂತೆ ಗಣೇಶೋತ್ಸವ ಹಾಗೂ ದತ್ತಜಯಂತಿ ವೇಳೆ ಪ್ರತಿ ವರ್ಷವು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ವಿಶಿಷ್ಟವಾಗಿ ನಗರದಲ್ಲಿ ಗುರುತಿಸಿಕೊಂಡಿದೆ.
Kshetra Samachara
29/11/2024 03:41 pm