ಸಿದ್ದಾಪುರ : ಕರಾವಳಿ ಮತ್ತು ಮಲೆನಾಡಿನ ಸಂಪರ್ಕನೀಡುವ ಸಿದ್ದಾಪುರದಿಂದ ಕುಮಟ ಸಾರಿಗೆ ರಸ್ತೆ ಬ್ರಿಟಿಷರ ಆಡಳಿತ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿದ್ದಾಗ ನಿರ್ಮಿಸಿದ ನಿಲ್ಕುಂದ-ಸಂತೆಗುಳಿ ಲೋಕೋಪಯೋಗಿ ರಸ್ತೆ ಸಂಪೂರ್ಣ ಜೀರ್ಣವ್ಯವಸ್ಥೆಯಲ್ಲಿ ಇರುವದನ್ನೂ ಹಾಗೂ ಸರ್ವಋತು ರಸ್ತೆಯನ್ನಾಗಿ ಪರಿವರ್ತಿಸಲು ಸಿದ್ದಾಪುರ ತಾಲೂಕಿನ ನಿಲ್ಕುಂದಕ್ಕೆ ಮುಂದಿನ ಒಂದು ತಿಂಗಳದೊಳಗೆ ಭೇಟಿ ನೀಡಿ ಪರಿಶೀಲಿಸುವೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ತಿಳಿಸಿದ್ದಾರೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ನೇತೃತ್ವದಲ್ಲಿ ನಿಯೋಗ ನ. 28 ರಂದು ಬೆಂಗಳೂರಿನ ಸಚಿವರ ಗ್ರಹ ಕಛೇರಿಯಲ್ಲಿ ಭೇಟಿಯಾಗಿ ಜೀರ್ಣಾವ್ಯಸ್ಥೆಯಲ್ಲಿರುವ ರಸ್ತೆಯ ಛಾಯಚಿತ್ರಣದೊಂದಿಗೆ ಸರ್ವಋತು ರಸ್ತೆಯ ಕುರಿತು ಸಚಿವರಿಗೆ ದಾಖಲೆಗಳ ಮೂಲಕ ಮಾಹಿತಿ ನೀಡಿದಾಗ ಸಚಿವರು ಮೇಲಿನಂತೆ ತಿಳಿಸಿದರೆಂದು ನಾಯ್ಕ ಹೇಳಿದ್ದಾರೆ.
ಕಳೆದ ೨ ದಶಕಕ್ಕಿಂತ ಮಿಕ್ಕಿ ಸಂತೆಗುಳಿ ಮಾರ್ಗವಾಗಿ ಕುಮಟದಿಂದ ಸಿದ್ದಾಪುರಕ್ಕೆ ೨೬ ಕಿಮೀ ರಸ್ತೆ ಸಂಪೂರ್ಣವಾಗಿ ಗಿಡಗಂಟಿ ಬೆಳೆದು ಸಂಪೂರ್ಣ ಸಂಚಾರ ಸ್ಥಗಿತಗೊಂಡ ಹಿನ್ನಲೆಯಲ್ಲಿ ಸ್ಥಳೀಕ ಗ್ರಾಮಸ್ಥರ ಶ್ರಮದಾನದಿಂದ ಪ್ರಥಮ ಹಂತದಲ್ಲಿ ಕಳೆದ ೨ ವರ್ಷದಿಂದ ಗ್ರಾಮಸ್ಥರು ತಾತ್ಪೂರ್ತಿಕ ರಸ್ತೆ ಸ್ವಪ್ರೇರಣೆಯಿಂದ ನಿರ್ಮಿಸಿಕೊಂದು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Kshetra Samachara
29/11/2024 03:04 pm