ಸಿದ್ದಾಪುರ : ಪಟ್ಟಣದ ಚಂದ್ರಗುತ್ತಿ ಸರ್ಕಲ್ ಬಳಿ ಸುಮಾರು 14-15 ಅಡಿ ಆಳದ ಚರಂಡಿಯಲ್ಲಿ ಆಕಳೊಂದು ಬಿದ್ದು ಅಸಹಾಯಕ ಸ್ಥಿತಿಯಲ್ಲಿರುವುದನ್ನ ಅಗ್ನಿ ಶಾಮಕದಳದ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ ಸುರಕ್ಷಿತವಾಗಿ ಮೇಲಕ್ಕೆ ಎತ್ತಿ ಆಕಳ ಪ್ರಾಣ ರಕ್ಷಿಸಿದ ಘಟನೆ ಬುಧವಾರ ನಡೆದಿದೆ.
ಠಾಣಾಧಿಕಾರಿ ಎ. ಸುಬ್ರಹ್ಮಣ್ಯ, ಸಿಬ್ಬಂದಿಯವರಾದ ಎಮ್, ಚಂದ್ರ ನಾಯ್ಕ, ನಾಗರಾಜ, ಪ್ರಮೋದ್, ಬಾಳೇಶ, ಮಂಜುನಾಥ, ಶಿವರಾಜ, ಕಿರಣ ಕುಮಾರ್, ಆನಂದ.ಬಿ ಹಾಗೂ ಸಾರ್ವಜನಿಕರಾದ ಎ ಜಿ ನಾಯ್ಕ, ಕುಮಾರ್ (ಆಟೋ ಚಾಲಕ ) ಸಂತೋಷ (ಆಟೋ ಚಾಲಕ ) ರಾಮು ( ಚಪ್ಪಲಿ ಅಂಗಡಿ ) ಲೋಕೇಶ್, ಅಂಬಿರೊಂದಿಗೆ ಕಾರ್ಯಾಚರಣೆ ನಡೆಸಿ ಚರಂಡಿಯಲ್ಲಿ ಬಿದ್ದಿದ್ದ ಆಕಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಕುಡಿಯಲು ನೀರು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
Kshetra Samachara
28/11/2024 05:46 am