ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ: "ಬಸ್ತಿ ಉತ್ತರಕೊಪ್ಪ ರಸ್ತೆ ಕಾಮಗಾರಿ ಮೊದಲು ಅಂಡರ್‌ಪಾಸ್‌ ನಿರ್ಮಿಸಿ"- ಸ್ಥಳೀಯರ ಪಟ್ಟು, ಪ್ರತಿಭಟನೆ

ಭಟ್ಕಳ: ತಾಲೂಕಿನ ಮುರುಡೇಶ್ವರದ ಬಸ್ತಿ ಉತ್ತರ ಕೊಪ್ಪಕ್ಕೆ ಹೋಗುವ ರಸ್ತೆಯ ಹತ್ತಿರ ಐಆರ್‌ಬಿ ಕಂಪೆನಿ ಈ ಹಿಂದೆ ಬಿಟ್ಟಿರುವ ರಸ್ತೆಯ ಕಾಮಗಾರಿ ಮಾಡಲು ಮಶೀನ್‌ ಗಳನ್ನು ತೆಗೆದುಕೊಂಡು ಬಂದಿದ್ದು, ಸ್ಥಳೀಯರು ವಿರೋಧಿಸಿ ಅಂಡರ್‌ಪಾಸ್‌ ನಿರ್ಮಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಉತ್ತರಕೊಪ್ಪಕ್ಕೆ ಹೋಗುವ ರಸ್ತೆಯ ಮೇಲೆ ಅಂಡರ್ ಪಾಸ್ ನಿರ್ಮಿಸಬೇಕು. ಅಂಡರ್ ಪಾಸ್ ನಿರ್ಮಿಸಿ ರಸ್ತೆ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ. ಯಾವುದೇ ಕಾರಣಕ್ಕೂ ರಸ್ತೆ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ ಅಂತಾ ಸಾರ್ವಜನಿಕರು ತಿಳಿಸಿದರು.

ಐಆರ್ ಬಿ ಕಂಪೆನಿಯ ಪ್ರಾಜೆಕ್ಟ್ ಡೈರೆಕ್ಟರ್ ಶಿವಕುಮಾರ್ ಹಾಜರಿದ್ದು, ಈಗಾಗಲೇ ನಾವು ಸರಕಾರಕ್ಕೆ ಬರೆದುಕೊಂಡಿದ್ದು, ಅದು ಬಂದ ನಂತರ ಅಂಡರ್ ಪಾಸ್ ಮಾಡುತ್ತೇವೆ. ಈಗ ಸದ್ಯಕ್ಕೆ ಈ ರಸ್ತೆಯನ್ನು ತುರ್ತು ರಿಪೇರಿ ಮಾಡುತ್ತೇವೆ ಅಂತ ಹೇಳಿದ್ದಕ್ಕೆ ಸಾರ್ವಜನಿಕರು ಯಾವುದೇ ಕಾರಣಕ್ಕೂ ಅಂಡರ್ ಪಾಸ್ ಮಾಡದೆ ಈ ರಸ್ತೆ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ ಎಂದರು.

ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ಹಲವೆಡೆ ಅವೈಜ್ಞಾನಿಕ ಕಾಮಗಾರಿಯಿಂದ ಅನೇಕ ಅಪಘಾತಗಳಾಗುತ್ತಿದ್ದು, ಅವುಗಳನ್ನು ತಪ್ಪಿಸುವಲ್ಲಿ ಸೂಕ್ತ ಕ್ರಮ ಜರುಗಿಸಬೇಕು. ಅಂಡರ್ ಪಾಸ್ ರಸ್ತೆ ಉತ್ತರಕೊಪ್ಪಕ್ಕೆ ಸೇರುತ್ತಿದ್ದು, ಇಲ್ಲಿ ಸುಮಾರು 30 ಗ್ರಾಮಗಳು ಇದ್ದು ಹೆಚ್ಚಿನವರು ಕೃಷಿಕರಾಗಿದ್ದಾರೆ.

ರಸ್ತೆಯ ಮೂಲಕ ಅಕ್ಕಪಕ್ಕದ ಶಾಲಾ ಮಕ್ಕಳು ಕೈಕಿಣಿ ಶಾಲೆಗೆ ಬರುತ್ತಿದ್ದಾರೆ. ಅಂಡರ್ ಪಾಸ್ ಆಗದಿದ್ದರೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ರಸ್ತೆಯನ್ನು ದಾಟಿ ಮೇಲ್ಭಾಗದಲ್ಲಿ ಸ್ಮಶಾನವಿದ್ದು, ಸ್ಮಶಾನಕ್ಕೆ ಹೋಗುವಾಗ ಚತುಷ್ಪಥ ಹೆದ್ದಾರಿಯನ್ನು ದಾಟಿ ಹೋಗಬೇಕಾಗಿದೆ. ಹಳ್ಳಿಯ ಭಾಗದವರೆಲ್ಲರೂ ತಮ್ಮ ದಿನನಿತ್ಯದ ಕೆಲಸಕ್ಕೆ ಈ ಹೆದ್ದಾರಿಯನ್ನು ದಾಟಿಯೇ ಹೋಗ ಬೇಕಾಗಿದ್ದರಿಂದ ಅಂಡರ್ ಪಾಸ್ ಅವಶ್ಯಕತೆಯಿದೆ ಎಂದು ಪಟ್ಟು ಹಿಡಿದರು.

ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಭಟ್ಕಳ ಸಹಾಯಕ ಆಯುಕ್ತೆ ಡಾ.ನಯನಾ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಮೊದಲು ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯಲಿ. ನಂತರ ಅಂಡರ್‌ ಪಾಸ್‌ ಬೇಡಿಕೆಯನ್ನು ಈಡೇರಿಸಲಾಗುತ್ತದೆ. ಎನ್ನುತ್ತಿದ್ದಂತೆಯೇ ಆಕ್ರೋಶಗೊಂಡ ಜನರು 8-10 ವರ್ಷಗಳಿಂದ ಇದನ್ನೇ ಹೇಳುತ್ತಿದ್ದೀರಿ. ಹೆದ್ದಾರಿ ಪ್ರಾಧಿಕಾರ ಕಾಮಗಾರಿಗೆ ಅನುಮೋದನೆಯನ್ನೂ ನೀಡಿದೆ.

ಆದರೆ, ಇಲ್ಲಿಯವರೆಗೂ ಕಾಮಗಾರಿ ಆರಂಭಿಸಿಲ್ಲ. ಅದನ್ನು ಬಿಟ್ಟು ಕೊನೆ ಹಂತದಲ್ಲಿ ಕಾಮಗಾರಿ ಅರ್ಧಂಬರ್ಧ ಮುಗಿಸಿ ಹೋಗಲು ಬಂದಿದ್ದೀರಿ. ಅಂಡರ್‌ ಪಾಸ್‌ ನಿರ್ಮಿಸದೇ ಹೆದ್ದಾರಿ ಅಗಲೀಕರಣ ನಡೆಸಿದರೆ ಅಪಘಾತಗಳು ಹೆಚ್ಚುವುದಲ್ಲದೇ, ಇದರಿಂದ ಮುಂದಿನ ಪೀಳಿಗೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಆದರೆ, ಅಂಡರ್‌ಪಾಸ್‌ ಹೊರತಾಗಿ ಇಲ್ಲಿ ಯಾವುದೇ ಕೆಲಸವನ್ನು ಮಾಡುವುದು ಬೇಡ ಎಂದರು. ನಂತರ ಕಾಮಗಾರಿಯನ್ನು ಸ್ಥಗಿತಗೊಳಿಸಿ ಐಆರ್‌ಬಿ ಸಿಬ್ಬಂದಿ ಅಲ್ಲಿಂದ ತೆರಳಿದರು.

Edited By : Vinayak Patil
PublicNext

PublicNext

27/11/2024 07:51 pm

Cinque Terre

18.63 K

Cinque Terre

0

ಸಂಬಂಧಿತ ಸುದ್ದಿ