ಸಾಗರ : ಜೋಗ ಜಲಪಾತ ಅಭಿವೃದ್ಧಿಗೆ ಈಗಾಗಲೇ 1.80 ಕೊಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದರು.
ಬುಧವಾರ ಜಿಲ್ಲಾಧಿಕಾರಿಗಳ ಜೊತೆ ಜೋಗ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ಜೋಗ ಜಲಪಾತ ಅಭಿವೃದ್ದಿಗೆ 1.80 ಕೊಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಬರುವ ಪ್ರವಾಸಿಗರರಿಗೆ ಆಕರ್ಷಣೆ ಗೊಳ್ಳುವ ರೀತಿಯಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಯಾವ ರೀತಿ ವಂಡರ್ಲಾಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೋ ಅದೇ ರೀತಿ ಎಲ್ಲಾ ಭಾಗದಿಂದಲೂ ಕೂಡ ನಮ್ಮ ಜೋಗ ಜಲಪಾತಕ್ಕೆ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜೋಗ ಜಲಪಾತವನ್ನು ಕಣ್ಣು ತುಂಬಿ ಕೊಳ್ಳಬೇಕು ಎನ್ನುವ ಉದ್ದೇಶ ನಮದಾಗಿದೆ. ಎಂದು ಹೇಳಿದ್ದರು .
PublicNext
27/11/2024 08:38 pm