ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಾಜಿ ದೇವದಾಸಿಯರಿಂದ ಧಾರವಾಡ ಡಿ.ಸಿ ಕಚೇರಿ ಎದುರು ಧರಣಿ

ಧಾರವಾಡ: ಮಾಜಿ ದೇವದಾಸಿಯರಿಗೆ ಸರ್ಕಾರದ ವಿವಿಧ ಸವಲತ್ತುಗಳನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ನೇತೃತ್ವದಲ್ಲಿ ಮಾಜಿ ದೇವದಾಸಿಯರು ಧಾರವಾಡ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೇವಿನ ತಪ್ಪಲು ಕಟ್ಟಿಕೊಂಡು ತಲೆ ಮೇಲೆ ದೇವರ ಮೂರ್ತಿ ಹೊತ್ತು ಪ್ರತಿಭಟನೆ ನಡೆಸುವ ಮೂಲಕ ಪ್ರತಿಭಟನಾಕಾರರು ಗಮನಸೆಳೆದರು.

1993-94ರ ಸರ್ವೆ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ 481 ಮಾಜಿ ದೇವದಾಸಿಯರಿದ್ದಾರೆ. 2007-08ರ ಸರ್ವೆ ಪ್ರಕಾರ 282 ಮಾಜಿ ದೇವದಾಸಿಯರಿದ್ದಾರೆ. ಒಟ್ಟು 763 ಮಾಜಿ ದೇವದಾಸಿಯರಿದ್ದು ಇವರಿಗೆ ಮಾಸಿಕ ಸಹಾಯ ಧನ ಸಿಗುತ್ತಿಲ್ಲ. ದೇವದಾಸಿಯರಿಗೆ ಪುನರ್ ವಸತಿ ಕಲ್ಪಿಸುವ ಯೋಜನೆಯಡಿ ಸಾಕಷ್ಟು ಷರತ್ತುಗಳಿವೆ. ಈ ಷರತ್ತುಗಳಿಂದ ಮಾಜಿ ದೇವದಾಸಿಯರಿಗೆ ನಿವೇಶನಗಳು ಸಿಗುತ್ತಿಲ್ಲ. ಈ ರೀತಿಯ ಸಮಸ್ಯೆಯನ್ನು ರಾಜ್ಯದ ಇಡೀ ಮಾಜಿ ದೇವದಾಸಿಯರು ಅನುಭವಿಸುತ್ತಿದ್ದಾರೆ. ದೇವದಾಸಿಯರಿಗೆ ಸರ್ಕಾರ ಪ್ರತಿ ತಿಂಗಳು ಸರಿಯಾಗಿ ಮಾಶಾಸನ ಕೂಡ ನೀಡುತ್ತಿಲ್ಲ. ಸರ್ಕಾರ ಇವರಿಗೆ ಯಾವುದೇ ರೀತಿಯ ವಿಶೇಷ ಯೋಜನೆಗಳನ್ನು ನೀಡಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ದೇವದಾಸಿಯರ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲಾಯಿತು.

Edited By : Vinayak Patil
Kshetra Samachara

Kshetra Samachara

26/11/2024 08:28 pm

Cinque Terre

18.37 K

Cinque Terre

2

ಸಂಬಂಧಿತ ಸುದ್ದಿ