ನವಲಗುಂದ: ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ನೂತನವಾಗಿ ಮಾಡಿಸಿದ 6 ಮಹಾತ್ಮರ ಉತ್ಸವಮೂರ್ತಿಗಳನ್ನು ಧಾರವಾಡ ಜಿಲ್ಲಾದ್ಯಂತ 62 ಹಳ್ಳಿಗಳ ಪ್ರಮುಖ ಬೀದಿಗಳಲ್ಲಿ 24 ದಿನಗಳವರೆಗೆ 6 ಟ್ರ್ಯಾಕ್ಟರ್‌ಗಳ ಮೇಲೆ ಮೆರವಣಿಗೆ ಮಾಡುತ್ತಾ ಸಂಗಮ ರಥವು ಜಗದ್ಗುರು ಶ್ರೀ ಸಿದ್ಧಾರೂಢರ ಮಠದಿಂದ ಪ್ರಾರಂಭಗೊಂಡು ಸಂತ ಶಿಶುನಾಳ ಶರೀಫ ಶಿವಯೋಗಿಗಳ ಮಠಕ್ಕೆ ಭೇಟಿ ನೀಡಿ ಇಂದು ಸೋಮವಾರ ನವಲಗುಂದ ಶ್ರೀ ಅಜಾತ ನಾಗಲಿಂಗ ಮಠಕ್ಕೆ ಆಗಮಿಸಿತು.
ಸಾಯಂಕಾಲ ಪಟ್ಟಣದ ಅಣ್ಣಿಗೇರಿ ರಸ್ತೆಯ ನೀಲಮ್ಮನ ಕೆರೆ ಹತ್ತಿರ ಗವಿಮಠದ ಬಸವಲಿಂಗ ಮಹಾಸ್ವಾಮಿಗಳು ಹಾಗೂ ನಾಗಲಿಂಗ ಮಠದ ಶ್ರೀ ವೀರೇಂದ್ರ ಮಹಾಸ್ವಾಮಿಗಳು ಮತ್ತು ಶಾಸಕ ಎನ್.ಎಚ್.ಕೋನರಡ್ಡಿ ಮಹಾತ್ಮರ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆ ನೀಲಮ್ಮನ ಕೆರೆಯಿಂದ ಪ್ರಾರಂಭಗೊಂಡು ನಗರದ ಲಿಂಗರಾಜ ವೃತ್ತ, ಗಾಂಧಿ ಮಾರುಕಟ್ಟೆಯಾದಿಯಾಗಿ, ವಿನಾಯಕ ಪೇಟೆ ಮೂಲಕ ಶ್ರೀ ನಾಗಲಿಂಗ ಸ್ವಾಮಿ ಮಠಕ್ಕೆ ತಲುಪಿತು. ದಾರಿಯುದ್ದಕ್ಕೂ ನೂರಾರು ಭಕ್ತರು ಮಹಾತ್ಮರ ಮೂರ್ತಿ ಕಂಡು ಪುನೀತರಾದರು.
Kshetra Samachara
26/11/2024 07:35 am