ಹುಬ್ಬಳ್ಳಿ: ಹುಬ್ಬಳ್ಳಿಯ ಹೊರವಲಯದಲ್ಲಿರುವ ಗಬ್ಬೂರ ಬಳಿಯಲ್ಲಿ ನಡೆಯುತ್ತಿರುವ ಫ್ಲೈಓವರ್ ಕಾಮಗಾರಿಯಿಂದ ಜನರಿಗೆ ಕಿರಿಕಿರಿಯಾಗುತ್ತಿರುವುದು ಒಂದೆಡೆಯಾದರೇ ಯಾವುದೇ ಸಂಚಾರಿ ನಿಯಮಗಳನ್ನು ವಾಹನ ಸವಾರರು ಪಾಲಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿಯ ಗಬ್ಬೂರ ಬಳಿಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಚಾಲನೆಗೆ ಯೂ ಟರ್ನ್ ವ್ಯವಸ್ಥೆ ಮಾಡಿದ್ದು, ಸೂಚನೆ ನೀಡಲಾಗಿದೆ. ಹೀಗಿದ್ದರೂ ಒನ್ ವೇಯಲ್ಲಿಯೇ ವಾಹನ ಓಡಾಡುತ್ತಿರುವುದು ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತಿದೆ. ಅಲ್ಲದೇ ರಾತ್ರಿಯ ವೇಳೆ ಮತ್ತಷ್ಟು ಸಮಸ್ಯೆ ಉಲ್ಭಣಗೊಳ್ಳುತ್ತಿದೆ.
ಈ ನಿಟ್ಟಿನಲ್ಲಿ ಕೂಡಲೇ ಸೂಕ್ತ ಕ್ರಮಗಳನ್ನು ಜರುಗಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಂಚಾರಿ ಪೊಲೀಸ್ ಇಲಾಖೆಗೆ ಹಾಗೂ ಕೂಗಳತೆಯ ದೂರದಲ್ಲಿರುವ ಆರ್.ಟಿ.ಒ ಕಚೇರಿಯ ಅಧಿಕಾರಿಗಳಿಗೆ ಉತ್ತರ ಕರ್ನಾಟಕ ಜೈ ಭೀಮಸೇನಾ ಸಂಘಟನೆಯ ಕಾರ್ಯಕರ್ತರು ಒತ್ತಾಯಿಸಿದ್ದು, ವಾಹನ ಸವಾರರಿಗೆ ಸೂಕ್ತ ಸಂಚಾರಿ ಕ್ರಮಗಳನ್ನು ಪಾಲಿಸುವಂತೆ ಮತ್ತು ಸ್ಥಳದಲ್ಲಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿದ್ದಾರೆ.
ಇನ್ನು, ಯೂ ಟರ್ನ್ ವ್ಯವಸ್ಥೆಯ ಮೂಲಕ ಹುಬ್ಬಳ್ಳಿ ಸಿಟಿಗೆ ಪ್ರವೇಶದ ವ್ಯವಸ್ಥೆ ನೀಡಿದ್ದರೂ ಬಹುತೇಕ ವಾಹನಗಳು ಬೇಕಾಬಿಟ್ಟಿಯಾಗಿ ಓಡಾಡುತ್ತಿದೆ. ಈ ಸ್ಥಳದಲ್ಲಿ ಸಂಚಾರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಅಥವಾ ಬ್ಯಾರಿಕೇಡ್ ವ್ಯವಸ್ಥೆ ಮೂಲಕ ಸೂಚಿತ ಮಾರ್ಗದಲ್ಲಿ ವಾಹನಗಳನ್ನು ಓಡಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯ ಪ್ರಮುಖರಾದ ಶಾನುಖಾನ್, ಅಝರ್ ಮುಲ್ಲಾ, ರಿಯಾಝ್ ಶಿರಡಿ, ಆಶೀಫ್ ಮುಲ್ಲಾ, ಸುಹೇಲ್ ಹಾಗೂ ಮಹೇಶ್ ಅವರು ಪಬ್ಲಿಕ್ ನೆಕ್ಸ್ಟ್ ಮೂಲಕ ಮನವಿ ಮಾಡಿದ್ದಾರೆ.
Kshetra Samachara
25/11/2024 04:52 pm