ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಅವಳಿನಗರದ ಜನರಿಗೆ ಧೂಳಿನ ಸಮಸ್ಯೆ ಶಾಪವಾಗಿ ಕಾಡುತ್ತಿದೆ. ಹಳೇ ಹುಬ್ಬಳ್ಳಿಯ ಗುಡಿಹಾಳ ರಸ್ತೆಯಲ್ಲಿನ ಜನರು ನಿಜಕ್ಕೂ ಬಹುದೊಡ್ಡ ಸಮಸ್ಯೆಯ ನಡುವೆಯೇ ಜೀವನ ನಡೆಸುತ್ತಿದ್ದಾರೆ.
ಅವಳಿನಗರದ ಧೂಳಿನ ಸಮಸ್ಯೆ ನಿಯಂತ್ರಣ ಹಲವಾರು ಮಷಿನ್ ಖರೀದಿಸಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿರುವ ಪಾಲಿಕೆ ಜನರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ. ಹೌದು.. ಹಳೇ ಹುಬ್ಬಳ್ಳಿಯ ವಿಶಾಲನಗರದ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಧೂಳಿನಿಂದ ಜನರು ಇಲ್ಲಿ ಓಡಾಡುವುದೇ ಕಷ್ಟ ಎನ್ನುತ್ತಿದ್ದಾರೆ. ಮಳೆಗಾಲದಲ್ಲಿ ಕೆಸರುಮಯವಾಗುವ ಈ ರಸ್ತೆ ಈ ಸಮಯದಲ್ಲಿ ಧೂಳಿನ ಮಜ್ಜನದಿಂದ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ.
ಇನ್ನೂ ಈ ಭಾಗದ ಪಾಲಿಕೆಯ ಚುನಾಯಿತ ಪ್ರತಿನಿಧಿಗಳಾಗಲಿ, ಶಾಸಕರಾಗಲಿ ಈ ಭಾಗದ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಧೂಳಿನ ಸಮಸ್ಯೆಯಿಂದ ಇಲ್ಲಿನ ವ್ಯಾಪಾರ ವಹಿವಾಟು ಸಂಪೂರ್ಣ ಕುಸಿತಗೊಂಡಿದ್ದು, ಇಲ್ಲಿನ ಜನರು ಆಕ್ರೋಶಗೊಂಡಿದ್ದಾರೆ.
Kshetra Samachara
25/11/2024 07:09 pm