ಹುಬ್ಬಳ್ಳಿ: ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳನ್ನೇ ಗುರಿಯಾಗಿಸುವ ಆನ್‌ಲೈನ್ ಲೈಂಗಿಕ ದೌರ್ಜನ್ಯವು ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣೆಯ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಯಂಗ್ ಇಂಡಿಯನ್ಸ್‌ನ ಹುಬ್ಬಳ್ಳಿ - ಧಾರವಾಡ ಘಟಕದ ಟೀಮ್ ಮಾಸೂಮ್ ಜಾಗೃತಿ ಅಭಿಯಾನಕ್ಕೆ ಮುಂದಾಗಿದೆ. ಇಂತಹದೊಂದು ಕಾರ್ಯ ನಿಜಕ್ಕೂ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗೆ ರಕ್ಷಾ ಕವಚದಂತಾಗಿದೆ.
ಹುಬ್ಬಳ್ಳಿ - ಧಾರವಾಡದ ಯಂಗ್ ಇಂಡಿಯನ್ಸ್‌ನ ಹುಬ್ಬಳ್ಳಿ - ಧಾರವಾಡ ಘಟಕದ ಟೀಮ್ ಮಾಸೂಮ್, ಮಕ್ಕಳನ್ನು ರಕ್ಷಿಸಲು ಮತ್ತು ಡಿಜಿಟಲ್ ಅಪಾಯಗಳ ಬಗ್ಗೆ ಪೋಷಕರಿಗೆ ತಿಳಿಸಲು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಸಾಕಷ್ಟು ಅರಿವು ಮತ್ತು ಸಾಮಾಜಿಕ ಕಳಂಕದ ಕಾರಣದಿಂದಾಗಿ, ಹಲವಾರು ಘಟನೆಗಳು ಬಹಿರಂಗಗೊಳ್ಳದೆ ಉಳಿದಿವೆ. 'ಯಂಗ್ ಇಂಡಿಯನ್ಸ್' ಹುಬ್ಬಳ್ಳಿ - ಧಾರವಾಡ ಘಟಕದ ಟೀಮ್ ಮಾಸೂಮ್, ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಉಪಕ್ರಮವನ್ನು ಕೈಗೊಂಡಿದೆ. ಹುಬ್ಬಳ್ಳಿಯ ವೈದ್ಯರಾದ ಡಾ.ದೀಪ್ತಿ ಜೋಶಿಯವರ ನೇತೃತ್ವದಲ್ಲಿ ಜಾಗೃತಿ ಅಭಿಯಾನಕ್ಕೆ ಮುಂದಾಗಿರುವುದು ವಿಶೇಷವಾಗಿದೆ.
ಕೋವಿಡ್ ನಂತರದ ಅವಧಿಯಿಂದ, ರಾಜ್ಯ ಮತ್ತು ದೇಶಾದ್ಯಂತ ಆನ್‌ಲೈನ್ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಎನ್‌ಸಿಆರ್‌ಬಿ ವರದಿಯು 2022ರಲ್ಲಿ ಮಕ್ಕಳ ವಿರುದ್ಧ ಒಟ್ಟು 1823 ಸೈಬರ್ ಅಪರಾಧ ಪ್ರಕರಣಗಳನ್ನು ಬಹಿರಂಗಪಡಿಸಿದೆ. ಹಿಂದಿನ ವರ್ಷ 1376 ರಿಂದ ಹೆಚ್ಚಾಗಿದೆ. 1171 ಪ್ರಕರಣಗಳು ಸೈಬರ್ ಅಶ್ಲೀಲತೆ ಮತ್ತು ಅನುಚಿತ ವಿಷಯದ ಪ್ರಸಾರ. ಇವುಗಳಲ್ಲಿ 239 ಪ್ರಕರಣಗಳು ಕರ್ನಾಟಕದಿಂದ ವರದಿಯಾಗಿವೆ, ಇದು ಒಟ್ಟು 13.11% ರಷ್ಟಿದೆ. ಮಕ್ಕಳು, ಪೋಷಕರು ಮತ್ತು ಶಿಕ್ಷಕರಲ್ಲಿ ಸಾಕಷ್ಟು ಅರಿವು ಇಲ್ಲದಿರುವುದು ಈ ಏರಿಕೆಗೆ ಮಹತ್ವದ ಅಂಶವಾಗಿದೆ. ಸಾಮಾನ್ಯವಾಗಿ ವರದಿಯಾಗದ ಆನ್‌ಲೈನ್ ಲೈಂಗಿಕ ದೌರ್ಜನ್ಯ ಘಟನೆಗಳ ಕುರಿತು ಮಕ್ಕಳು ಮತ್ತು ಶಾಲಾ ಶಿಕ್ಷಕರಿಗೆ ಜಾಗೃತಿ ಸೆಷನ್‌ಗಳನ್ನು ನಡೆಸುವ ಮೂಲಕ ಟೀಮ್ ಮಸೂಮ್ ಸಾಮಾಜಿಕ ಕಾಳಜಿಯನ್ನು ಹೊಂದಿದ್ದು, ಮಕ್ಕಳ ಮೇಲಿನ ಆನ್‌ಲೈನ್ ಲೈಂಗಿಕ ದೌರ್ಜನ್ಯಕ್ಕೆ ಬ್ರೇಕ್ ಹಾಕುವ ವಿನೂತನ ಕಾರ್ಯಕ್ಕೆ ಮುಂದಾಗಿರುವುದು ವಿಶೇಷವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/11/2024 04:49 pm