ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಶಾಲಾ ಮಕ್ಕಳಿಗೆ ತಟ್ಟೆ, ಗ್ಲಾಸ್ ಉಚಿತ ವಿತರಣೆ

ನವಲಗುಂದ: ಪ್ರೌಢ ಶಾಲೆಯ ಮಕ್ಕಳಿಗೆ ಮದ್ಯಾಹ್ನದ ಊಟದ ಅನಕೂಲಕ್ಕೆ ತಟ್ಟೆ ಮತ್ತು ಗ್ಲಾಸನ್ನು ಉಚಿತವಾಗಿ ವಿತರಣೆ ಮಾಡಿದ ಉತ್ತರ ಕರ್ನಾಟಕ ಪರಿವರ್ತನ ಸಮುದಾಯದ ಕಾರ್ಯ ಶ್ಲಾಘನೀಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕರಾದ ಶಿವಾನಂದ ಬೆಂಚಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಶ್ರೀ ನಾಗಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಉತ್ತರ ಕರ್ನಾಟಕ ಪರಿವರ್ತನ ಸಮುದಾಯದಿಂದ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಉಚಿತ ತಟ್ಟೆ ಮತ್ತು ಗ್ಲಾಸ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇವತ್ತು ಸಮಾಜದಲ್ಲಿ ಸಂಪತ್ತು ಹೊಂದಿರುವವರು ಸಾಕಷ್ಟು ಜನರಿದ್ದಾರೆ ಆದರೆ ಕೊಡುವ ಮನಸ್ಸು ಹೊಂದಿರುವಂತವರು ಬಹಳ ವಿರಳ, ಅಂತವರ ಮದ್ಯೆ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಮಾಬುಸಾಬರವರು ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ಬೇಯಿಸಲು ಸಿಲೆಂಡರ್ ಮತ್ತು ಗ್ಯಾಸ್ ನೀಡಿದರು ಅವರ ಕಾರ್ಯ ಮೆಚ್ಚುವಂತಹದಾಗಿದೆ ಎಂದರು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಪರಿವರ್ತನ ಸಮುದಾಯದಿಂದ ಪ್ರಾಥಮಿಕ ಶಾಲಾ ಶಿಕ್ಷಣ ಸಂಯೋಜಕರಾದ ಶಿವಾನಂದ ಬೆಂಚಿಕೇರಿ ಅವರಿಗೆ ಸನ್ಮಾನಿಸಲಾಯಿತು.

ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಮಾಬುಸಾಬ ಯರಗುಪ್ಪಿ, ಬಸನಗೌಡ ಪಾಟೀಲ, ಮಲ್ಲಿಕಾರ್ಜುನಸ್ವಾಮಿ ಮಠಪತಿ, ಮಂಜುನಾಥ ಬೈಲೂರ, ಎಮ್. ಎಸ್ ನರಸಪ್ಪನವರ, ಮಹಮ್ಮದ ಕೊಪ್ಪಳ, ಶಿವಾನಂದ ಚಲವಾದಿ, ಮುಖ್ಯ ಶಿಕ್ಷಕ ವಾಯ್. ಬಿ ಸುರಗಿಹಳ್ಳಿ, ಸಹ ಶಿಕ್ಷಕರಾದ ಬಿ.ಸಿ ಬಂಡಿವಡ್ಡರ, ಆರ್.ಕೆ.ಲಂಬಾಣಿ, ಬಿ.ಕೆ ಬೆಟಗೇರಿ, ಎಸ್ ಎನ್. ಕಿರೆಸೂರ್, ಕುಮಾರಿ ಜಯಶ್ರೀ ಶಿರೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

25/11/2024 09:42 pm

Cinque Terre

8.66 K

Cinque Terre

0

ಸಂಬಂಧಿತ ಸುದ್ದಿ