ನವಲಗುಂದ: ಗ್ರಾಮೀಣ ಗ್ರಂಥಾಲಯಗಳು ಈಗ ಅರಿವು ಕೇಂದ್ರವಾಗಿ ಡಿಜಿಟಲ್ ಮಾಹಿತಿಗಳನ್ನು ತ್ವರಿತವಾಗಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಿಕ್ಷಣ ಫೌಂಡೇಶನ್ ಮಧ್ಯ ಕರ್ನಾಟಕದ ವಿಭಾಗದ ಜಡ್ ಎಂ ಶ್ರೀಶೈಲ್ ಅಥಣಿ ಅವರು ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕುಗಳ ಗ್ರಾಮ ಪಂಚಾಯಿತ ಮೇಲ್ವಿಚಾರಕರಿಗೆ ಶಿಕ್ಷಣ ಫೌಂಡೇಶನ್ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಒಂದು ದಿನದ ನಾಯಕತ್ವ ಮತ್ತು ಡಿಜಿಟಲ್ ಸಾಕ್ಷರತೆಯ ಕುರಿತಾದ ತರಬೇತಿಯ ಧ್ಯೇಯೋದ್ದೇಶವನ್ನು ಉದ್ದೇಶಿಸಿ ಅವರು ನಮ್ಮ ಗ್ರಂಥಾಲಯಗಳು ಶಿಕ್ಷಣ ಫೌಂಡೇಶನ್ ಸಂಸ್ಥೆಯಿಂದ ನೀಡಿರುವ ಡಿಜಿಟಲ್ ಸಾಧನೆಗಳನ್ನು ಬಳಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನವಲಗುಂದ ತಾ.ಪ ಸಹಾಯಕ ನಿರ್ದೇಶಕ ಹರ್ಷವರ್ಧನ ಮಾತನಾಡಿ RDPR ಇಲಾಖೆಗೆ ಒಳಪಟ್ಟ ನಂತರ ಆಧುನಿಕತೆಯ ಸ್ಪರ್ಶ ಪಡೆದ ಗ್ರಾಮ ಪಂಚಾಯತ ಅರಿವು ಕೇಂದ್ರಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿವೆ. ಅರಿವು ಕೇಂದ್ರ ಗ್ರಂಥಪಾಲಕರು ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ಹಿಸಬೇಕು. ಜೀವನದಲ್ಲಿ ಕೌಶಲ್ಯವಿದ್ದರೆ ಮಾತ್ರ ಜ್ಞಾನಕ್ಕೆ ಬಲವಿರುತ್ತದೆ. ಮುಂಬರುವ ಪೀಳಿಗೆಗೆ ಡಿಜಿಟಲ್ ಸಾಕ್ಷರತೆಯ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಪಂಚಾಯತ ಯೋಜನಾ ಅಧಿಕಾರಿಗಳಾದ ಬಿ. ಎಸ್. ಪಾಟೀಲ, ಶಿಕ್ಷಣ ಫೌಂಡೇಶನ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಶೈಲ ಅಥಣಿ ಹಾಗೂ ಮಂಜುನಾಥ ಮ್ಯಾಗಿನಮನಿ ತರಬೇತಿ ನೀಡಿದರು. ನವಲಗುಂದ ಮತ್ತು ಅಣ್ಣಿಗೇರಿ ಸೇರಿದಂತೆ ಎರಡು ತಾಲೂಕಿನ ಗ್ರಂಥಪಾಲಕರು ಹಾಗೂ ತಾಲೂಕು ಸಂಯೋಜಕರು ಉಪಸ್ಥಿತರಿದ್ದರು.
Kshetra Samachara
25/11/2024 09:57 pm