ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಕೇಂದ್ರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಡಾ.ಚಂದ್ರಶೇಖರ ಕಂಬಾರ

ಧಾರವಾಡ: ಹಿಂದಿ ಭಾಷಾ ಹೇರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಂಡಿದ್ದ ಧರೆಗೆ ದೊಡ್ಡವರು ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡ ಬಳಸುವವರೆಗೂ ಕನ್ನಡಕ್ಕೆ ಏನೂ ಸಮಸ್ಯೆ ಇಲ್ಲ. ಆದರೆ, ಹಠ ಹಿಡಿದು ಕನ್ನಡ ಮಾತನಾಡಬೇಕು. ಕನ್ನಡ ಮಾತನಾಡಿದಾಗ ಸಿಗುವಷ್ಟು ಸಮಾಧಾನ ಬೇರೆ ಭಾಷೆ ಮಾತನಾಡಿದಾಗ ಸಿಗುವುದಿಲ್ಲ. ಕನ್ನಡಕ್ಕೆ ಇರುವ ಸಾಮರ್ಥ್ಯ ಭಾರತದ ಅನೇಕ ಭಾಷೆಗಳಿಗಿಲ್ಲ ಎಂದರು.

ಅಕ್ಕಪಕ್ಕ ತೆಲಗು, ತಮಿಳು ಇವೆ. ಆದರೆ, ಆ ಭಾಷೆಗಳಿಗೆ ನಮ್ಮ ಭಾಷೆ ಕಸಿದುಕೊಳ್ಳಲು ಆಗಿಲ್ಲ. ನಮ್ಮನ್ನು ಆಳಲು ಬೇರೆ ಬೇರೆ ಭಾಷೆಗಳು ಪ್ರಯತ್ನ ಮಾಡುತ್ತಿವೆ. ಆದರೆ, ನಮ್ಮನ್ನಾಳಲು ಬೇರೆ ಯಾವ ಭಾಷೆಗೂ ಆಗಿಲ್ಲ. ಸರ್ಕಾರಗಳು ಏನೇನೋ ಮಾಡುತ್ತಿವೆ. ಆದರೆ, ನಮ ಜನ ಕನ್ನಡ ಬಿಡುತ್ತಿಲ್ಲ. ಕನ್ನಡದ ಜನ ಸರ್ಕಾರಗಳಿಗಿಂತ ದೊಡ್ಡವರು ಎಂದರು.

ಯಾವ ಸರ್ಕಾರ ಬಂದರೂ ನಮ್ಮ ಬಾಯಿ ಮುಚ್ಚುವುದಿಲ್ಲ. ನಾವು ನಮ್ಮ ಭಾಷೆ ಮಾತನಾಡುತ್ತೇವಷ್ಟೇ. ಅವರು ಏನು ಮಾಡಿಕೊಳ್ಳುತ್ತಾರೋ ಮಾಡಿಕೊಳ್ಳಲಿ. ನಮಗೆ ಕನ್ನಡ ಭಾಷೆ ಇದೆ. ಕೇಂದ್ರದ ಮೂರು ಸಂಸ್ಥೆಗಳಿಗೆ ಅಧ್ಯಕ್ಷನಾದವನು ನಾನು. ಸಾಹಿತ್ಯ ಅಕಾಡೆಮಿ, ನಾಟಕ-ಸಂಗೀತ ಅಕಾಡೆಮಿ ಹಾಗೂ ಎನ್‌ಎಸ್‌ಡಿಗೆ ಅಧ್ಯಕ್ಷನಾಗಿದ್ದೆ. ಆಗ ನನಗೆ ಹಿಂದಿ ಮಾತನಾಡಬೇಕು ಎನಿಸಿಲ್ಲ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡಲಿಲ್ಲ ಎಂದರು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/11/2024 01:54 pm

Cinque Terre

16.64 K

Cinque Terre

7

ಸಂಬಂಧಿತ ಸುದ್ದಿ