ಕಾಗವಾಡ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದಾಗಿ ಸುಮಾರು 200 ಎಕರೆ ಕಬ್ಬು ಸುಟ್ಟು ಕರಕಲಾದ ಘಟನೆ ಕಾಗವಾಡ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ.
ಕಾಗವಾಡ ಪಟ್ಟಣದ ಶಿರಗುಪ್ಪಿ ರಸ್ತೆಯ ಬ್ರಹ್ಮನಾಥ ನೀರಾವರಿ ಪಂಪ್ ಹತ್ತಿರದ ಸುರೇಶ ಪಾಟೀಲ್ ಡುಮ್ಮಗೋಳ ಎಂಬ ರೈತರ ಜಮೀನಿನಲ್ಲಿ ಹೊತ್ತಿಕೊಂಡ ಬೆಂಕಿ ಮಂಗಾವತಿ ರಸ್ತೆಯವರೆಗೂ ಬೆಂಕಿ ಆವರಿಕೊಂಡು ಅನೇಕ ರೈತರ ಕಬ್ಬು ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಉಗಾರ ಸಕ್ಕರೆ ಕಾರ್ಖಾನೆ ಬೆಂಕಿ ನಂದಿಸುವ ವಾಹನ, ದತ್ತ ಸಕ್ಕರೆ ಕಾರ್ಖಾನೆ ಹಾಗೂ ರಾಯಬಾಗದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರೂ ಸಹ ಬೆಂಕಿಯ ಕೆನ್ನಾಲೆಗೆ ಸುಮಾರು 200 ಎಕರೆ ಕಬ್ಬು ಸುಟ್ಟಿದೆ.
ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಸುಮಾರು 200 ಎಕರೆ ಕಬ್ಬು ಸುಟ್ಟು ನಾಶವಾಗಿದೆ ಇದಕ್ಕೆ ನೇರ ಹೊಣೆ ಹೆಸ್ಕಾಂ ಇಲಾಖೆಯವರೆ ಕಾರಣ ಹೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಳೆದ ಬಾರಿಯೂ ಇದೆ ರೀತಿ ಅವಘಡ ಸಂಭವಿಸಿತ್ತು ಆವಾಗ ಎಚ್ಚೆತ್ತುಕೊಂಡಿದ್ದರೆ ಈಗ ಈ ರೀತಿ ಅವಘಡ ಸಂಭವಿಸಿ ರೈತರಿಗೆ ನಷ್ಟವಾಗುತ್ತಿರಲಿಲ್ಲ. ಬೆಂಕಿ ಹತ್ತಿದಾಗ ಪೊಲೀಸ್, ಕಂದಾಯ, ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಯಾರೂ ಸ್ಥಳಕ್ಕೆ ಬಂದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
PublicNext
25/11/2024 10:33 pm