ಕಾಗವಾಡ : ವಿಜಯಪುರದಿಂದ ಬೆಳಗಾವಿಗೆ ಹೊರಟ್ಟಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ನ ಫಾಟಾ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ತಾಲ್ಲೂಕಿನ ನವಲಿಹಾಳ ಗ್ರಾಮದ ಬಳಿ ಕಬ್ಬಿನ ಗದ್ದೆಗೆ ನುಗಿದ್ದು ಬಸ್ ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣ -ಪುಟ್ಟ ಗಾಯಗಳಾಗಿವೆ.
ಗುರುವಾರ ಮಧ್ಯಾಹ್ನ ವಿಜಯಪುರದಿಂದ ಅಥಣಿ ಮಾರ್ಗವಾಗಿ ಬೆಳಗಾವಿಗೆ ಹೊರಟಿದ್ದ ಬಸ್ಸಿನಲ್ಲಿ 55 ಜನ ಪ್ರಯಾಣಿಸುತ್ತಿದ್ದರು. ಬಸ್ ಕಾಗವಾಡ ತಾಲ್ಲೂಕಿನ ನವಲಿಹಾಳ ಬಳಿ ಬಂದಾಗ ಬಸ್‌ನ ಫಾಟಾ ತುಂಡಾಗಿದೆ ಕೂಡಲೇ ಚಾಲಕ ಬಸ್ ನಿಯಂತ್ರಿಸಲು ಪ್ರಯತ್ನಿಸಿ ಕಬ್ಬಿನ ಗದ್ದೆಗೆ ನುಗ್ಗಿಸಿ ಭಾರಿ ಅನಾಹುತ ತಪ್ಪಿಸಿದ್ದಾನೆ. ಗಾಯಾಳುಗಳನ್ನು ಅಥಣಿ ಹಾಗೂ ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದ್ದು ಸ್ಥಳಕ್ಕೆ ಪಿಎಸ್‌ಐ ಜಿ.ಜಿ.ಬಿರಾದರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
PublicNext
21/11/2024 08:29 pm