ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಬಾಗ: ಮದವೇರಿದ ಗೂಳಿ, ಜನರ ಮೇಲೆ ದಾಳಿ- ಸೆರೆ ಸಿಕ್ಕರೂ ಕಾಲ ಮಿಂಚಿತ್ತು!

ರಾಯಬಾಗ: ರಾಯಬಾಗ ಪಟ್ಟಣದಲ್ಲಿ ಗೂಳಿಯೊಂದು ಮದವೇರಿ ಜನರಿಗೆ ಸಿಕ್ಕ ಸಿಕ್ಕಲ್ಲಿ ಭಯ ಹುಟ್ಟಿಸಿದಲ್ಲದೆ, ಪಟ್ಟಣದಲ್ಲಿ ಕೆಲಕಾಲ ಜನರನ್ನು ಬೆನ್ನಟ್ಟಿ, ಪರಿಸರದಲ್ಲಿ ಭಯಭೀತಿ ಮೂಡಿಸಿತು.

ಅಲ್ಲದೆ, ಕಾಲೇಜ್ ವಿದ್ಯಾರ್ಥಿನಿ ಮೇಲೆಯೂ ಎರಗಿ ಕೊಂಬಿನಿಂದ ತಿವಿದಿದ್ದು, ವಿದ್ಯಾರ್ಥಿನಿಯ ತಲೆಗೆ ಗಾಯವಾಗಿದೆ. ಅಷ್ಟಕ್ಕೇ ನಿಲ್ಲದ ಗೂಳಿಯ ಅಬ್ಬರ ವಯೋವೃದ್ಧರೊಬ್ಬರ ಮೇಲೆಯೂ ದಾಳಿ ನಡೆಸಿ ಕೊಂಬಿನಿಂದ ತಿವಿದು ಗಾಯಗೊಳಿಸಿದೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂದುವರಿದ ಗೂಳಿ ರಾಯಬಾಗ ಪೊಲೀಸ್ ಠಾಣೆಯ ಆವರಣದ ಒಳಕ್ಕೂ ನುಗ್ಗಿದೆ. ಪಶು ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟು ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ. ಆದರೆ, ಕಾಲ ಮಿಂಚಿ ಹೋಗಿತ್ತು! ಪೊಲೀಸರು,ಅಗ್ನಿಶಾಮಕ ದಳ, ಪಶು ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಗೂಳಿಯನ್ನು ಹಿಡಿಯುವಷ್ಟರಲ್ಲಿ ಗೂಳಿಯ ಪ್ರಾಣ ಪಕ್ಷಿ ಹಾರಿ ಹೋಗಿದ್ದು ಮಾತ್ರ ದುರ್ದೈವದ ಸಂಗತಿ.

ವರದಿ: ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್, ರಾಯಬಾಗ

Edited By : Suman K
Kshetra Samachara

Kshetra Samachara

23/11/2024 03:45 pm

Cinque Terre

28.28 K

Cinque Terre

0

ಸಂಬಂಧಿತ ಸುದ್ದಿ