ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಕಣ್ಣಿಗೆ ಕಾರದ ಪುಡಿ ಎರಚಿ 12 ಲಕ್ಷ ದೋಚಿದ ಖದೀಮರು

ಬೆಳಗಾವಿ : ಕಳೆದ 20 ರಂದು ಬೈಕ್ ಅಡ್ಡಗಟ್ಟಿ ಬೈಕ್ ಸವಾರರ ಕಣ್ಣಿಗೆ ಕಾರದ ಪುಡಿ ಎರಚಿ ಅವರಲ್ಲಿದ್ದ 12 ಲಕ್ಷ ಹಣ ದೋಚಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಬಳಿ ಇರುವ ಹಾರೂಗೇರಿ ಕ್ರಾಸ್ ಬಳಿ ಘಟನೆ ನಡೆದಿದೆ.

ಮೂಡಲಗಿಯ ಜಾಫರ್ ಮುಜಾವರ್ ಅವರ ಕಿರಾಣಿ ಹೋಲ್ ಸೇಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇರ್ಷಾರ್ ಹಾಗೂ ಸಂಜು ಎನ್ನುವವರು ಕಿರಾಣಿ ಅಂಗಡಿಗಳಿಗೆ ಹೋಲ್ ಸೇಲ್ ದರದಲ್ಲಿ ಸಾಮಗ್ರಿಗಳನ್ನು ನೀಡುತ್ತಿದ್ದರು. ನಂತರ ಪ್ರತಿ ಕಿರಾಣಿ ಅಂಗಡಿಗಳಿಗೆ ತೆರಳಿ ಹಣ ಸಂಗ್ರಹ ಮಾಡಿಕೊಂಡು ತೇರದಾಳಕ್ಕೆ ತೆರಳುವಾಗ ಘಟನೆ ನಡೆದಿದೆ. ಸಂಜು ಹಾಗೂ ಇರ್ಷಾರ್ ಅವರು ಪ್ರತಿ ಅಂಗಡಿಗಳಿಂದ ಬಾಕಿ ಬಿಲ್ ವಸೂಲಿ ಮಾಡಿಕೊಂಡು ತೇರದಾಳಕ್ಕೆ ತೆರಳುವ ಸಂಪೂರ್ಣ ಮಾಹಿತಿ ಸಂಗ್ರಹಿಸಿಕೊಂಡು ಎರಡು ಬೈಕ್ ಮೇಲೆ ಬಂದ ನಾಲ್ವರು ಖದೀಮರು ಅವರನ್ನು ಅಡ್ಡಗಟ್ಟಿ ದೊನ್ನೆಗಳನ್ನು ತೋರಿಸಿ ಕಣ್ಣಿಗೆ ಕಾರಣ ಪುಡಿ ಎರಚಿ ಹಣ ದೋಚಿ ಪರಾಯಾಗಿದ್ದಾರೆ. ಈ ಕುರಿತು ಹೋಲ್ ಸೆಲ್ ಅಂಗಡಿಯ ಮಾಲೀಕ ಜಾಫರ್ ಮುಜಾವರ್ ಮೂಡಲಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸಧ್ಯ ಪೊಲೀಸರು ಖದೀಮರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Edited By : PublicNext Desk
Kshetra Samachara

Kshetra Samachara

25/11/2024 03:24 pm

Cinque Terre

7.6 K

Cinque Terre

0

ಸಂಬಂಧಿತ ಸುದ್ದಿ