ಅಥಣಿ: ಈ ವಾರದ ಬಡ್ಡಿ ದಂಧೆಯೂ ಕೇವಲ ಕೆಲವು ಶ್ರೀಮಂತ ವ್ಯಕ್ತಿಗಳಿಂದ ಅಷ್ಟೇ ಅಲ್ಲ, ತಮ್ಮ ದುಡಿಮೆಯಲ್ಲಿ ಅಲ್ಪ ಸ್ವಲ್ಪ ಕೂಡಿಟ್ಟು ಆರ್ಥಿಕ ಶಿಸ್ತು ಪಾಲಿಸಿದ ಕೆಲವು ಮಧ್ಯಮ ವರ್ಗದ ಜನರಿಂದಲೂ ನಡೆಯುತ್ತಿದೆ. ಇದಕ್ಕೆ ಮೂಲ ಕಾರಣವೇ ಈ ದಂಧೆ ಅಲ್ಪಾವಧಿಯಲ್ಲಿ ಅಧಿಕ ಗಳಿಕೆಯ ಹಾದಿಯಾಗಿ ಕಂಡಿರುವುದು.
ಇವರು ನೀಡುವ ಸಾಲಕ್ಕೆ ವಾರಕ್ಕೆ ಶೇ. 10 ಬಡ್ಡಿದರ ಆಗಿರುವುದರಿಂದ ಬಡ್ಡಿಯ ಭಾಗ ಹತ್ತು ವಾರಕ್ಕೆ ಅಂದರೆ ಕೇವಲ ಎರಡೂವರೆ ತಿಂಗಳಿಗೆ ಇವರ ಮೂಲ ಹಣ ಮರುಪಾವತಿ ಆಗಿರುತ್ತದೆ. ಅದರ ನಂತರದ್ದು ಏನಾದರೂ ಶೋಷಣೆ ಮತ್ತು ಲಾಭ ಅಷ್ಟೇ.
ಯಾಕೆ ಈ ಮಾತು ಅನ್ನೋದಾದರೆ ಗಡಿ ಭಾಗದಲ್ಲಿ ತಮ್ಮ ಜೀವನೋಪಾಯಕ್ಕೆ ತೆಗೆದ ಅಲ್ಪ ಸಾಲಗಳು ಈಗ ಯಮ ಪಾಶವಾಗಿವೆ. ಕೃಷಿ ಕಾಯಕದಲ್ಲಿ ನಷ್ಟ ಅನುಭವಿಸಿದ್ದ ರೈತರು ಈಗ ಸಾಲ ಮರುಪಾವತಿಗೆ ಕಣ್ಣೀರು ಹಾಕುವ ಸಂಕಷ್ಟ ಎದುರಾಗಿದೆ. ತಾಲೂಕಿನ ಜಂಬಗಿ ಗ್ರಾಮದ ರೈತ ಶ್ರೀಧರ ಪವಾರ ತನ್ನ 90 ಸಾವಿರ ಲೋನ್ ಮರುಪಾವತಿಗೆ ಬಂದ ಖಾಸಗಿ ಫೈನಾನ್ಸ್, ರೈತನ ಜೊತೆ ದಬ್ಬಾಳಿಕೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಐಐಎಫ್ಎಲ್ ಸಮಸ್ತ ಖಾಸಗಿ ಫೈನಾನ್ಸ್ ನ ಸಿಬ್ಬಂದಿಗಳು ರೈತನ ಮನೆಗೆ ಬಂದು ತಿಂಗಳ ಕಂತು ನೀಡುವಂತೆ ಒತ್ತಾಯ ಮಾಡಿ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಕೇವಲ ನಾಲ್ಕು ಸಾವಿರ ಕಂತಿನ ಪಾವತಿಗಾಗಿ ರೈತ ಕಣ್ಣೀರು ಹಾಕಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಇಂತಹ ಖಾಸಗಿ ಫೈನಾನ್ಸ್ ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರೈತರು ಮನವಿ ಮಾಡಿದ್ದಾರೆ.
PublicNext
24/11/2024 07:16 pm