ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: 'ಕೊಟ್ಟಿ ವಕೀಲರ ವಿರುದ್ಧ ಕ್ರಮ ಕೈಗೊಳ್ಳಿ' - ವಕೀಲರಿಂದ ಪ್ರತಿಭಟನೆ

ಬೆಳಗಾವಿ: ಬೆಳಗಾವಿ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಕೊಟ್ಟಿ ವಕೀಲರು ವಿರುದ್ದ ಕ್ರಮ ಕೈಗೊಂಡು ವಕೀಲರಿಗೆ ನ್ಯಾಯ ಒದಗಿಸುವಂತೆ ಅಗ್ರಹಿಸಿ ಕೋರ್ಟ್ ಕಲಾಪ ಭಹಿಷ್ಕರಿಸಿ ವಕೀಲರಿಂದ ಪ್ರತಿಭಟನೆ ನಡೆಸಲಾಯಿತು.

ಇಂದು ಬೆಳಗಾವಿ ನಗರದ ವಕೀಲರ ಸಂಘದಿಂದ ನ್ಯಾಯಾಲಯದಲ್ಲಿ ಪ್ರಾಕ್ಟಿಸ್ ಮಾಡುತ್ತಿರುವ ಕೆಲ ಕೊಟ್ಟಿ ವಕೀಲರ ವಿರುದ್ಧ ಕ್ರಮ ಕೈಗೊಂಡು ನ್ಯಾಯವಾದಿಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕೋರ್ಟ್ ಕಲಾಪ ಭಹಿಷ್ಕರಿಸಿ ಘೋಷಣೆ ಕೂಗಿ ಕೋರ್ಟ್ ಸರ್ಕಲ್‌ನಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.‌

ಬೆಳಗಾವಿ ನ್ಯಾಯಾಲಯದಲ್ಲಿ ಮೂರು ಜನ ಕೊಟ್ಟಿ ವಕೀಲರು ಯಾವುದೇ ಪರೀಕ್ಷೆಯನ್ನು ಉತ್ತಿರ್ಣರಾಗದೇ ಪ್ರಾಕ್ಟಿಸ್ ಮಾಡುತ್ತಿದ್ದಾರೆ. ಇದರ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಆದರೆ ಕೋಟ್ಟಿ ಮಹಿಳಾ ವಕೀಲರು ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ದೂರುದಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೂರು ನೀಡುತ್ತಲೇ ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅಟ್ರಾಸಿಟಿ ಕೇಸ್ ದಾಖಲಿಸಲಾಗಿದೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪೊಲೀಸರು ಯೋಗ್ಯ ತನಿಖೆ ನಡೆಸಿಬೇಕು ಎಂದು ನ್ಯಾಯವಾದಿಗಳ ಮೇಲೆ ಅನ್ಯಾಯ ಮಾಡಲಾಗುತ್ತಿದೆ ಎಂದು ಪ್ರತಿಭಟಿಸಲಾಯಿತು.

Edited By : Ashok M
PublicNext

PublicNext

25/11/2024 02:55 pm

Cinque Terre

12.48 K

Cinque Terre

0

ಸಂಬಂಧಿತ ಸುದ್ದಿ