ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಆಟೋ ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹುಬ್ಬಳ್ಳಿ ಧಾರವಾಡ ಆಟೋ ಚಾಲಕರ ಸಂಘಟನೆಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ತಹಶಿಲ್ದಾರರ ಕಚೇರಿಯ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಡಳಿತ ಹಾಗೂ ಪಾಲಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಸುಮಾರು 400ಕ್ಕಿಂತ ಹೆಚ್ಚು ಅಟೋ ರೀಕ್ಷಾ ನಿಲ್ದಾಣಗಳನ್ನು ಮಹಾನಗರ ಅಡಿಯಲ್ಲಿ ಸ್ಮಾರ್ಟ ಸೀಟಿ ಅಡಿಯಲ್ಲಿ ಆಟೋ ರೀಕ್ಷಾ ನಿಲ್ದಾಣವನ್ನು ನಿರ್ಮಿಸಬೇಕು. ಆರ್.ಟಿ.ಓ ಕಛೇರಿಯಲ್ಲಿ ಅಟೋ ರೀಕ್ಷಾ ಪರಮಿಟ್ ಅವಧಿ ಮುಗಿದ ತಿಂಗಳ ತಡವಾದರೆ ಪ್ರತಿ ತಿಂಗಳಿಗೆ ರೂ. 50-00 ದಂಡವನ್ನು ವಸೂಲಿ ಮಾಡುವದನ್ನು ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಆರ್.ಟಿ.ಓ ಕಚೇರಿಯಲ್ಲಿ ಅಟೋ ರೀಕ್ಷಾ ಪ್ರತ್ಯೇಕ ಟ್ರೈಯಲ್ ನೀಡಿ ಚಾಲಕರಿಗೆ ಚಾಲನ ಪತ್ರ ಲೈಸನ್ಸ್ ನೀಡಬೇಕು. ನಗರದಲ್ಲಿ ಸಂಚರಿಸುತ್ತಿರುವ ಟಾಟಾ ಎಸ್ ಟಮ್ ಟಮ್ ವಾಹನ, ಕ್ರೋಜರ್, ಖಾಸಗಿ ವಾಹನಗಳನ್ನು ನಗರದಿಂದ 4 ರಿಂದ 5 ಕಿ.ಮೀ ದೂರ ಇಡಬೇಕು ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/11/2024 12:49 pm