ಹುಬ್ಬಳ್ಳಿ: ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಹನ ಅಸುಂಡಿ ಅವರಿಗೆ ಅವರ ಕಾರ್ಯವೈಖರಿಯನ್ನು ಮೆಚ್ಚಿ ವರಿಷ್ಠರು ಉಪ ಚುನಾವಣೆಯ ಕ್ಯಾಂಪ್ ಆಫೀಸ್ ಉಸ್ತುವಾರಿಯನ್ನು ನೀಡಿದ್ದರು. ಈ ಬಾರಿ ಶಿಗ್ಗಾಂವಿ ಉಪ ಚುನಾವಣೆಯ ಕ್ಯಾಂಪ್ ಆಫೀಸ್ ಇಡೀ ಉಸ್ತುವಾರಿಯನ್ನು ಹೊತ್ತ ಮೋಹನ ಅಸುಂಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಪಕ್ಷದ ವರಿಷ್ಠರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಎಸ್,,,, ಮೋಹನ ಅಸುಂಡಿ ಅವರು 2018 ರ ಜಮಖಂಡಿ ಉಪ ಚುನಾವಣೆ, 2019 ರ ಕುಂದಗೋಳ ಉಪ ಚುನಾವಣೆ ಹಾಗೂ 2021 ರ ಹಾನಗಲ್ ಉಪ ಚುನಾವಣೆಯಲ್ಲಿ ಕ್ಯಾಂಪ್ ಆಫೀಸ್ ಉಸ್ತುವಾರಿಯಾಗಿ ಹಗಲಿರುಳು ಕೆಲಸ ಮಾಡಿದ್ದಾರೆ. ಆ ಮೂರು ಕ್ಷೇತ್ರಗಳು ಗೆಲುವಿನ ಚುಕ್ಕಾಣಿ ಹಿಡಿದಿದ್ದವು. ಇನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್ ಅವರ ಆದೇಶದ ಮೇರೆಗೆ ಮೋಹನ ಅಸುಂಡಿ ಅವರು ಈ ಬಾರಿ ಶಿಗ್ಗಾಂವಿ ಉಪಚುನಾವಣೆಯ ಕ್ಯಾಂಪ್ ಆಫೀಸ್ ಉಸ್ತುವಾರಿಯಾಗಿ ಹಗಲಿರುಳು ಶ್ರಮ ವಹಿಸಿದ್ದಕ್ಕೆ ಬಿಜೆಪಿ ಭದ್ರಕೋಟೆಯಾಗಿದ್ದ ಶಿಗ್ಗಾಂವಿ ಕ್ಷೇತ್ರದಲ್ಲಿ ಕೈ ಪಡೆ ಗೆಲ್ಲುವುದರ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿದೆ. ಮೋಹನ ಅಸುಂಡಿ ಅವರ ಕಾರ್ಯಕ್ಕೆ ವರಿಷ್ಠರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಉಪ ಚುನಾವಣೆಯ ಗೆಲುವಿಗೆ ಕ್ಯಾಂಪ್ ಉಸ್ತುವಾರಿ ಹೊತ್ತ ಮೋಹನ ಅಸುಂಡಿ ಅವರು ಜವಾಬ್ದಾರಿ ಕೊಟ್ಟ ಪಕ್ಷದ ವರಿಷ್ಠರಿಗೆ ಮತ್ತು ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇನ್ನು ಮೋಹನ ಅಸುಂಡಿ ಅವರನ್ನು ಹಾನಗಲ್, ಜಮಖಂಡಿ, ಕುಂದಗೋಳ ಹಾಗೂ ಶಿಗ್ಗಾವಿ ಉಪ ಚುನಾವಣೆಗಳ ಪ್ರಚಾರ ಕಚೇರಿ ಜವಾಬ್ದಾರಿ ವಹಿಸಿದ್ದರು. ಪ್ರತಿ ಚುನಾವಣೆಯಲ್ಲಿ 20-25 ದಿನ ಅಲ್ಲಿಯೇ ಇದ್ದು, ನಾಯಕರ ಪ್ರಚಾರ ವಿವರವನ್ನೆಲ್ಲ ಕೆಪಿಸಿಸಿ, ಎಐಸಿಸಿಗೆ ವರದಿ ನೀಡುವ ಮೂಲಕ ವ್ಯವಸ್ಥಿತ ಚುನಾವಣೆಗೆ ಭದ್ರ ಬುನಾದಿ ಹಾಕಿದ್ದರು. ಅದರ ಪರಿಣಾಮವೇ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯವಾಗಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಮೋಹನ ಅಸುಂಡಿ ಅವರನ್ನು ಅಭಿನಂದಿಸಿದ್ದಾರೆ. ಮೋಹನ ಅಸುಂಡಿ ಅವರ ಜೊತೆ
ಅಬ್ದುಲ್ ಗಣಿ, ನವೀದ್ ಮುಲ್ಲಾ, ಸಾಗರ ಹಿರೇಮನಿ, ಅಭಿಮನ್ಯು ರೆಡ್ಡಿ, ಪ್ರವೀಣ ಶಲವಡಿ, ಆನಂದ ಮಗ್ದುಮ್, ಸಂತೋಷ ಜಕ್ಕಪ್ಪನವರ, ರವಿ ಬಡ್ನಿ, ಮಂಜು ಉಪ್ಪಾರ, ಅಬ್ದುಲ್ ದೇಸಾಯಿ, ದೇವು ಮಡ್ಳಿ ಹೀಗೆ ಹಲವಾರು ಪದಾಧಿಕಾರಿಗಳು ಕೈ ಜೋಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/11/2024 06:29 pm