ಹುಬ್ಬಳ್ಳಿ: ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ "ಗುಬ್ಬಚ್ಚಿ" ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 'ಮನ್ ಕೀ ಬಾತ್'ನಲ್ಲಿ ಕರೆ ನೀಡಿದ್ದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಬಾಗಲಕೋಟೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ ಇಂದು ಮನ್ ಕೀ ಬಾತ್ ವೀಕ್ಷಿಸಿದ ಸಚಿವರು, ಮಕ್ಕಳು ಗುಬ್ಬಚ್ಚಿಯನ್ನು ಫೋಟೋ - ವಿಡಿಯೋದಲ್ಲಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರು ದೇಶದಾದ್ಯಂತ 'ಮನ್ ಕೀ ಬಾತ್ ' ಅಮೋಘ ಕಾರ್ಯಕ್ರಮದ ಮೂಲಕ ದೇಶವಾಸಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.
ಇಂದಿನ ಆಧುನಿಕ ಯುಗದಲ್ಲಿ ದೇಶಾದ್ಯಂತ ನಗರೀಕರಣ ಹೆಚ್ಚುತ್ತಿರುವ ಕಾರಣ ಗುಬ್ಬಚ್ಚಿ ಹಕ್ಕಿ ಅಳಿವಿನಂಚಿಗೆ ತಲುಪಿದೆ. ಪ್ರಧಾನಿ ಈ ಬಾರಿಯ ಮನ್ ಕೀ ಬಾತ್ ಆವೃತ್ತಿಯಲ್ಲಿ ಇದನ್ನು ಪ್ರಸ್ತಾಸಿದ್ದಾರೆ ಎಂದರು. ಈಗಿನ ಮಕ್ಕಳಿಗೆ ಗುಬ್ಬಚ್ಚಿಯನ್ನು ವಿಡಿಯೋ ಅಥವಾ ಚಿತ್ರದ ಮುಖಾಂತರ ಪರಿಚಯಿಸುವ ಸಂದರ್ಭ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಳಿವಿನಂಚಿನಲ್ಲಿ ಇರುವ ಗುಬ್ಬಚ್ಚಿ ಸಂತತಿ ರಕ್ಷಿಸಲು ಚೆನ್ನೈನ ಕುಡುಗಲ್ ಟ್ರಸ್ಟ್ ತಮ್ಮ ಶಾಲಾ ಮಕ್ಕಳ ಮುಖಾಂತರ ಶತಯುಗತಾಯ ಪ್ರಯತ್ನ ನಡೆಸುತ್ತಿದ್ದು, ದೇಶವೇ ಹೆಮ್ಮೆ ಪಡುವ ವಿಚಾರ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಬದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು, ಯುವಕರು ಹಾಗೂ ಅಪಾರ ಸಂಖ್ಯೆಯ ಗ್ರಾಮವಾಸಿಗಳೊಂದಿಗೆ ಸಚಿವ ಪ್ರಹ್ಲಾದ್ ಜೋಶಿ ಮನ್ ಕೀ ಬಾತ್ ಆಲಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
24/11/2024 05:54 pm