ಹು-ಧಾ ವಾರ್ಡ್ ನಂ.68 ರ ಜನರ ಗೋಳು ಕೇಳುವವರಾರು..? ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಜನ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಸ್ಮಾರ್ಟ್ ಸಿಟಿ ಮಾಡಲು ಹೊರಟು ಸುಮಾರು ವರ್ಷಗಳು ಕಳೆಯುತ್ತಾ ಬಂದಿದೆ. ಆದ್ರೆ ದುರಾದೃಷ್ಟಕ್ಕೆ ಇನ್ನೂ ಸ್ಮಾರ್ಟ್ ಆಗಿಲ್ಲ. ನಿಮ್ಮ ನೆಚ್ಚಿನ ಪಬ್ಲಿಕ್ ನೆಕ್ಸ್ಟ್ ನಮ್ಮ ಊರು ನಮ್ಮ ಕೆರೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 68 ಕ್ಕೆ ಹೋಗಿದ್ದೇ ತಡಾ, ಅಲ್ಲಿನ ಜನರ ಸಮಸ್ಯೆಗಳು ಮುಗಿಲು ಮುಟ್ಟಿವೆ. ಅಲ್ಲಿನ ಜನರು ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ ನೀವೇ ನೋಡಿ.
ನೋಡಿದ್ರಲ್ಲ ವೀಕ್ಷಕರೇ ಹೀಗೆ ಮೂಗು ಮುಚ್ಚಿಕೊಂಡು, ತಗ್ಗುಗುಂಡಿಗಳಲ್ಲಿ ಕೈಯಲ್ಲಿ ಪ್ರಾಣ ಹಿಡಿದುಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 68 ರಲ್ಲಿ ಬರುವ ಜೋಳದ ಓಣಿಯ ಮುಖ್ಯರಸ್ತೆಯಲ್ಲಿ. ಈ ಜೋಳದ ಓಣಿಯಲ್ಲಿ ಸರಿಯಾದ ರಸ್ತೆ ಇಲ್ಲ, ಎಲ್ಲೆಂದರಲ್ಲಿ ಕಸ ಹಾಕುತ್ತಾರೆ.
ಸಾರ್ವಜನಿಕ ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಅಷ್ಟೇ ಅಲ್ದೇ ಸಾಯಂಕಾಲ ಆದ್ರೆ ಸಾಕು ಬಿಡಾಡಿ ದನಗಳ ಹಾವಳಿಯಿಂದ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ. ಚರಂಡಿ ನೀರಿನಿಂದ ಗಟಾರು ತುಂಬಿ ಗಬ್ಬು ವಾಸನೆ ಬರುತ್ತಿದೆ. ಇಲ್ಲಿನ ನಿವಾಸಿಗಳು ಮನೆಯಲ್ಲೂ ಮೂಗು ಮುಚ್ಚಿಕೊಂಡು ಇರುವಂತಾಗಿದೆ. ಇದರಿಂದ ಅದೆಷ್ಟೋ ವಯಸ್ಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಅಂದ್ರೆ ಈ ರೋಡ್ ನ್ನು ಮಾಡಿ ಕೇವಲ ಎರಡು ವರ್ಷಗಳು ಅಷ್ಟೇ ಆಗಿದೆ. ಈಗ ನೋಡಿದ್ರೆ ರಸ್ತೆಯೆಲ್ಲಾ ಕಿತ್ತು ಬಂದು, ತಗ್ಗು ಗುಂಡಿಗಳೇ ಹೆಚ್ಚಾಗಿವೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ನಮ್ಮ ಊರು ನಮ್ಮ ಕೆರೆ, ನಮ್ಮ ವಾರ್ಡ್ ಅಭಿಯಾನದ ಬಗ್ಗೆ ನಮ್ಮ ವರದಿಗಾರ ಈರಣ್ಣ ವಾಲಿಕಾರ ಜೋಳದ ಓಣಿಯ ಸಮಸ್ಯೆಗಳ ಬಗ್ಗೆ ಅಲ್ಲಿನ ಜನರನ್ನೇ ಮಾತನಾಡಿಸಿದ್ದಾರೆ ನೋಡಿ.
ಇನ್ನು ಇಷ್ಟೊಂದು ಸಮಸ್ಯೆಗಳಿಂದ ಇಲ್ಲಿನ ನಿವಾಸಿಗಳು ಗೋಳಾಡುತ್ತಿದ್ದಾರೆ. ವಾರ್ಡ್ ನಂಬರ್ 68 ರ ಕಾರ್ಪೊರೇಟರ್ ನಿರಂಜನಯ್ಯ ಹಿರೇಮಠ ಅವರು, ಈ ಜನರ ಸಮಸ್ಯೆಗಳನ್ನು ಬಗೆ ಹರಿಸಿ ನೆಮ್ಮದಿ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕಾಗಿದೆ. ಇಲ್ಲವಾದ್ರೆ ಪಬ್ಲಿಕ್ ನೆಕ್ಸ್ಟ್ ಜನರ ಸಮಸ್ಯೆಗಳನ್ನು ಎತ್ತಿ ತೋರಿಸಲು ಸದಾ ಸಿದ್ಧ.
ಇದು ನಮ್ಮ ಊರು ನಮ್ಮ ಕೆರೆ, ನಮ್ಮ ವಾರ್ಡ್ ಅಭಿಯಾನ..
ಕ್ಯಾಮೆರಾ ಪರ್ಸನ್ ಗಜಾನನ ಜೊತೆ ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/11/2024 05:54 pm