ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಬೆಳೆ ಹಾನಿಯಲ್ಲಿ 18.887 ಹೆಕ್ಟೇರ್ ಫೈನಲ್ - ಶೀಘ್ರವೇ ಪರಿಹಾರ ಬಿಡುಗಡೆ

ಕುಂದಗೋಳ: ಅತಿವೃಷ್ಟಿ ಹೊಡೆತಕ್ಕೆ ಸಿಲುಕಿ ಬೆಳೆ ಕಳೆದುಕೊಂಡ ರೈತಾಪಿ ಜನರಿಗೆ ಕಂದಾಯ ಇಲಾಖೆ ಖುಷಿ ಸುದ್ದಿಯೊಂದನ್ನು ನೀಡಿದ್ದು, ವಾರದ ಒಳಗಾಗಿ ಪರಿಹಾರ ಪ್ರಕ್ರಿಯೆಗೆ ಹಾನಿ ದತ್ತಾಂಶ ಸಲ್ಲಿಸುವ ಭರವಸೆ ನೀಡಿದೆ.

ಕುಂದಗೋಳ ತಾಲೂಕಿನಾದ್ಯಂತ ಈ ವರ್ಷ ಸುರಿದ ಧಾರಾಕಾರ ಮಳೆ, ಜಲ ಪ್ರಳಯವನ್ನೇ ಸೃಷ್ಟಿಸಿ ಅಕ್ಷರಶಃ ಅನ್ನದಾತನ ಬದುಕನ್ನೇ ಕಸಿದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬೆಳೆ ಕಳೆದುಕೊಂಡ ರೈತ ಪರಿಹಾರಕ್ಕೆ ಮೊರೆ ಇಟ್ಟಿದ್ದರು. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಇದೀಗ ಹಾನಿಯಾದ ಬೆಳೆಗಳ ಜಂಟಿ ಸಮೀಕ್ಷೆ ಮುಕ್ತಾಯ ಮಾಡಿದ್ದು, ಒಟ್ಟು 18.887 ಹೆಕ್ಟೇರ್ ಹಾನಿ ಪ್ರದೇಶದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸುವಲ್ಲಿ ಕಂದಾಯ ಇಲಾಖೆ ಕಾರ್ಯ ಪ್ರವೃತ್ತರಾಗಿ ಶೀಘ್ರವೇ ಪರಿಹಾರ ಒದಗಿಸುವ ಭರವಸೆಯನ್ನು ತಹಶೀಲ್ದಾರ್ ರಾಜು ಮಾವರಕರ ನೀಡಿದ್ದಾರೆ.

ಪ್ರಸ್ತುತ ನವೆಂಬರ್ 11ರ ವರೆಗೆ ಬೆಳೆ ಹಾನಿ ಆಕ್ಷೇಪಣೆ ಸ್ವೀಕರಿಸಿದ ಅಧಿಕಾರಿಗಳು ಕೊನೆಯದಾಗಿ 1500 ಆಕ್ಷೇಪಣೆ ಅರ್ಜಿ ಸ್ವೀಕರಿಸಿ 18.887 ಹೆಕ್ಟೇರ್ ಹಾನಿ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಿದ್ದಲ್ಲಿ ಅರ್ಹ ರೈತರಿಗೆ ಪರಿಹಾರ ಜಮಾ ಆಗಲಿದೆ.

ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್

Edited By : Suman K
Kshetra Samachara

Kshetra Samachara

26/11/2024 05:20 pm

Cinque Terre

11.35 K

Cinque Terre

0

ಸಂಬಂಧಿತ ಸುದ್ದಿ