ಧಾರವಾಡ: ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು 28 ಪ್ರಸ್ತಾಪಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅವುಗಳನ್ನು ಸರ್ಕಾರ ಕೈಬಿಡಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ಮಾಡುವ ಸಂಬಂಧ ಕರ್ನಾಟಕ ವನ್ಯಜೀವಿ ಸಲಹಾ ಮಂಡಳಿ ಮುಂದೆ ಪ್ರಸ್ತಾಪ ಬಂದಿದೆ. ಈ ಮಂಡಳಿಗೆ ಸಿಎಂ ಅವರೇ ಅಧ್ಯಕ್ಷರಾಗಿದ್ದಾರೆ. ಯಾರಿಗೂ ಕೇಳಲಾಗದೇ ರಹಸ್ಯವಾಗಿ ಪ್ರಸ್ತಾಪ ಸಲ್ಲಿಕೆಯಾಗಿವೆ. ಅಕ್ಟೋಬರ್ 5 ರಂದು ಮಂಡಳಿ ಸಭೆಯಲ್ಲಿ 28 ಪ್ರಸ್ತಾಪ ಬಂದಿವೆ. ಆಗ ನಾನು ಅಮೆರಿಕದಲ್ಲಿದ್ದೆ. ವಿಷಯ ಗೊತ್ತಾದ ತಕ್ಷಣ ಪತ್ರ ಬರೆಯುವ ಪ್ರಯತ್ನ ಮಾಡಿದ್ದೇವೆ. ಕಪ್ಪತ್ತಗುಡ್ಡದಲ್ಲಿ ಯಾವುದೇ ಗಣಿಗಾರಿಕೆ ಮಾಡಬಾರದು. ಅದು ಜೈವಿಕ ವೈವಿದ್ಯತೆಯ ತಾಣ. ಸಂಡೂರು ಹಿಲ್ಸ್ ಮತ್ತು ಕಪ್ಪತ್ತಗುಡ್ಡ ಆಕ್ಸಿಜನ್ ಬ್ಯಾಂಕ್ ಆಗಿವೆ ಇವುಗಳನ್ನು ಉಳಿಸಬೇಕು ಎಂದರು.
Kshetra Samachara
25/11/2024 06:22 pm