ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಜಿಲ್ಲಾಸ್ಪತ್ರೆಯಲ್ಲಿ ಮಗು ಕದ್ದೊಯ್ದ ವ್ಯಕ್ತಿ - ಕಣ್ಣೀರು ಹಾಕಿ ಗೋಳಿಟ್ಟ ತಾಯಿ

ವಿಜಯಪುರ: ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ 1 ವರ್ಷದ ಕಂದಮ್ಮನನ್ನು ಅಪರಿಚಿತ ವ್ಯಕ್ತಿ ಕದ್ದೊಯ್ದಿರುವ ಘಟನೆ ನಡೆದಿದೆ.

ಮಗುವನ್ನ ಕಳೆದುಕೊಂಡ ತಾಯಿಯು ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ಎನ್ನಲಾಗಿದೆ. ತನ್ನ ಇಬ್ಬರು ಮಕ್ಕಳೂಂದಿಗೆ ವಿಜಯಪುರದ ಸಂಬಂಧಿಕರ ಮನೆಗೆ ಬಂದಿದ್ದರು. 1 ವರ್ಷದ ಮಗು ಸಂದೀಪನ ಆರೋಗ್ಯ ಕೆಟ್ಟಿರುವ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ತಾಯಿ ಮಾತ್ರೆ ತರಲು ಹೋದಾ ಅಪರಿಚಿತ ವ್ಯಕ್ತಿ ಮಗುವನ್ನು ಕದ್ದು ಪರಾರಿಯಾಗಿದ್ದಾನೆ.

ಅಪರಿಚಿತ ವ್ಯಕ್ತಿ ಕುಡಿದ ಮತ್ತಿನಲ್ಲಿದ್ದ ಎಂದು ತಿಳಿದು ಬಂದಿದ್ದು ಮಗುವಿನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

24/11/2024 06:11 pm

Cinque Terre

21.94 K

Cinque Terre

0

ಸಂಬಂಧಿತ ಸುದ್ದಿ