ವಿಜಯಪುರ: ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಇಟ್ಟುಕೊಂಡಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಅಂದಾಜು 22 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಹೌದು ! ವಿಜಯಪುರದ ಸಿಂಧಗಿ ಕ್ರಾಸ್ ದಿಂದ ಬುರಣಾಪುರ ಹೋಗುವ ಮಾರ್ಗ ಮಧ್ಯೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಎರಡು ಕಾರ್ ನಲ್ಲಿ ಖದೀಮರು ಗಾಂಜಾ ಸಂಗ್ರಹಿಸಿ ಇಟ್ಟುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಸುಮಾರು 46 ಕೆಜಿ 676 ಗ್ರಾಂ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ.
ಗಾಂಜಾ ಮೌಲ್ಯ ಅಂದಾಜು 22 ಲಕ್ಷ ಹಾಗೂ ಎರಡು ಕಾರಿನ ಮೌಲ್ಯ 8 ಲಕ್ಷ. ಒಟ್ಟು 30 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಸಂತೋಷ ನಾಗಶೆಟ್ಟಿ ರಾಠೋಡ (35), ಸಂಜು ಕಿಶನ್ ರಾಠೋಡ (33) ಹಾಗೂ ಸಂತೋಷ ಧನಸಿಂಗ್ ರಾಠೋಡ (38) ಎಂಬಾತರನ್ನ ವಶಕ್ಕೆ ಪಡೆಯಲಾಗಿದ್ದು ಈ ಕುರಿತು ವಿಜಯಪುರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ್, ವಿಜಯಪುರ
PublicNext
23/11/2024 08:35 am