ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ಗ್ರಾಮಕ್ಕೆ ಸಿಸಿಟಿವಿ ಕಣ್ಗಾವಲು, ಮೈಕ್ ಅಳವಡಿಕೆ - ಕಳ್ಳರ ಹಾವಳಿ ತಡೆಗಟ್ಟಲು ಅಧಿಕಾರಿಗಳ ವಿನೂತನ ಕಾರ್ಯ

ವಿಜಯಪುರ: ಟ್ರಾಫಿಕ್ ನಿಯಂತ್ರಣ, ಸರ್ಕಾರದ ಪ್ರಕಟಣೆ, ವಿದ್ಯುತ್ ದೀಪಗಳ ನಿರ್ವಹಣೆ ಕಳ್ಳರ ಹಾವಳಿ ತಡೆಗಟ್ಟಲು ಪಂಚಾಯತಿ ಅಧಿಕಾರಿಗಳು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಹೌದು...ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣ ಸಂಪೂರ್ಣವಾಗಿ ಸಿಸಿಟಿವಿ ಕಣ್ಗಾವಲಿನಲ್ಲಿದೆ. ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಒಟ್ಟು 15 ವಾರ್ಡ್‌ಗಳಿವೆ, ಅದರಲ್ಲಿ ಪ್ರಮುಖವಾದ 10 ಕಡೆಗಳಲ್ಲಿ 32 ಸಿಸಿಟಿವಿ ಅಳವಡಿಕೆ ಮಾಡಿದ್ದಾರೆ. ಜೊತೆಗೆ ಮೈಕ್ ಅಳವಡಿಸಿದ್ದು ವಿಶೇಷವಾಗಿದೆ.

ಇನ್ನೂ ಪಟ್ಟಣ ಪಂಚಾಯಿತಿ ಅನುದಾನ ಜೊತೆಗೆ ಸರ್ಕಾರದ ಅನುದಾನ ಬಳಸಿ ಮನಗೂಳಿ ಪಟ್ಟಣದಲ್ಲಿ ಸಿಸಿಟಿವಿ ಅಳವಡಿಸಿರೋದು ಜಿಲ್ಲೆಯಲ್ಲೆ ಮೊದಲ ಪಟ್ಟಣ ಪಂಚಾಯಿತಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ...

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಇರೋದ್ರಿಂದ ಇದರ ನಿರ್ವಹಣೆಯನ್ನ ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಠಾಣೆ ಎರಡು ಕಡೆಗಳಲ್ಲಿದೆ. ಟ್ರಾಫಿಕ್ ನಿಯಂತ್ರಣ, ಜೊತೆಗೆ ಸಾರ್ವಜನಿಕ ಪ್ರಕಟಣೆ, ಕರ ವಸೂಲಾತಿ ಪ್ರಕಟಣೆಯನ್ನು ಸಿಸಿಟಿವಿ ಹಾಗೂ ಮೈಕ್ ಮೂಲಕವೇ ಸಂದೇಶ ರವಾನಿಸುತ್ತಾರೆ.

ಸಿಸಿ ಟಿವಿಗಳ ಪಕ್ಕದಲ್ಲೇ ಮೈಕ್ ಕೂಡಾ ಅಳವಡಿಸಿರುವ ಕಾರಣ ಕುಳಿತ ಸ್ಥಳದಲ್ಲೇ ಪೋಲಿಸರು ಕಾನೂನು ಸುವ್ಯವಸ್ಥೆಗಾಗಿ ಸೂಕ್ತ ನಿರ್ದೇಶನ ನೀಡುತ್ತಾರೆ. ಸಿಸಿಟಿವಿ ಅಳವಡಿಕೆಯಿಂದ ಕಾನೂನು ಉಲ್ಲಂಘನೆ ಮಾಡುವರು ಹಾಗೂ ಪುಂಡರ ಪುಂಡಾಟಕ್ಕೆ ಬ್ರೇಕ್ ಹಾಕಲಾಗಿದೆ ಎನ್ನುತ್ತಾರೆ ಮನಗೂಳಿ ಗ್ರಾಮಸ್ಥರು.

ಮಂಜು ಕಲಾಲ, ಪಬ್ಲಿಕ ನೆಕ್ಸ್ಟ ವಿಜಯಪುರ...

Edited By : Vinayak Patil
PublicNext

PublicNext

17/11/2024 04:06 pm

Cinque Terre

53.01 K

Cinque Terre

0

ಸಂಬಂಧಿತ ಸುದ್ದಿ