ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ ಜಿಲ್ಲೆಯ ನೂತನ ಎಸ್‌ಪಿ ಲಕ್ಷ್ಮಣ ನಿಂಬರಗಿ

ವಿಜಯಪುರ: ಜಿಲ್ಲೆಯ ನೂತನ ಎಸ್‌ಪಿಯಾಗಿ ಐಪಿಎಸ್ ಅಧಿಕಾರಿ ಲಕ್ಷ್ಮಣ ನಿಂಬರಗಿ ಅವರನ್ನ ಸರ್ಕಾರ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.

ಇಂದು ಸರ್ಕಾರ ಹೊರಡಿಸಿರುವ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶದಲ್ಲಿ ಲಕ್ಷ್ಮಣ ನಿಂಬರಗಿ ಇವರು ನೂತನ ಎಸ್‌ಪಿಯಾಗಿ ವರ್ಗಾವಣೆ ಗೊಂಡಿದ್ದಾರೆ. 2014ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಲಕ್ಷ್ಮಣ ನಿಂಬರಗಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದವರಾಗಿದ್ದಾರೆ. ಇನ್ನು ಉಡುಪಿ, ಬೆಳಗಾವಿ, ಬಳ್ಳಾರಿ ಹಾಗೂ ಸಿಸಿಬಿಯಲ್ಲಿ ಸೇವೆ ಸಲ್ಲಿಸಿರುವ ಇವರು ಇದೀಗ ವಿಜಯಪುರ ಜಿಲ್ಲೆಗೆ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದಾರೆ.

ಈ ಮೊದಲಿನ ಎಸ್‌ಪಿ ಹೃಷಿಕೇಶ್ ಸೋನವಾಣೆ ವರ್ಗಾವಣೆ ಬಳಿಕ ಪ್ರಸನ್ನ ದೇಸಾಯಿ ಪ್ರಭಾರ ಎಸ್‌ಪಿ ಆಗಿದ್ದರು.

Edited By : Nagaraj Tulugeri
PublicNext

PublicNext

15/11/2024 01:21 pm

Cinque Terre

11.05 K

Cinque Terre

0

ಸಂಬಂಧಿತ ಸುದ್ದಿ