ವಿಜಯಪುರ: ಯುವಕನೋರ್ವ ಬಾಲಕಿಗೆ ಸಿನಿಮಾ ಸ್ಟೈಲ್‌ನಲ್ಲಿ ತಾಳಿ ಕಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಸತಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರು ಇದರಿಂದ ಆತಂಕ ಪಡುವಂತಾಗಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕಂಪೌಂಡ್ ಬಳಿ ಯುವಕನೊಬ್ಬ ಅಪ್ರಾಪ್ತೆಗೆ ತಾಳಿ ಕಟ್ಟಿದ್ದಾನೆ ಎಂದು ಹೇಳಲಾಗಿದೆ. ತಾಳಿ ಕಟ್ಟಿರುವ ಯುವಕ ಮೌನೇಶ ಮಾದರ ಅಂತ ಗುರುತಿಸಲಾಗಿದೆ.
ಈ ಘಟನೆಯನ್ನು ಮೌನೇಶನ ಸ್ನೇಹಿತ ಸಂಗಮೇಶ ಮೊಬೈಲ್ ಫೋನ್‌ನಲ್ಲಿ ವಿಡಿಯೋ . ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ ಎನ್ನಲಾಗಿದೆ. ನವೆಂಬರ್ 24 ರಂದು ಬಾಲಕಿಯ ಎಂದು ಹೇಳಿ ಬಾಲಕಿಯನ್ನ ಹೊರಗೆ ಕರೆಯಿಸಿ ಕೃತ್ಯ ಎಸಗಿದ್ದಾರೆ. ತಾಳಿ ಕಟ್ಟೋ ವೇಳೆ ಬಾಲಕಿಯಿಂದ ಯಾವುದೆ ಪ್ರತಿರೋಧ ಕಂಡುಬಂದಿಲ್ಲ. ಸಂಬಂಧಗಳನ್ನೆ ತಿಳಿಯದ ಅಪ್ರಾಪ್ತೆ ತನ್ನ ತಾಯಿ ತಂದೆಗೆ ವಿಚಾರ ತಿಳಿಸಿದ್ದಾಳೆ. ನಂತರ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.
ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಮೌನೇಶ ಹಾಗೂ ಸಂಗಮೇಶ ವಿರುದ್ದ ಪೋಕ್ಸೊ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿತರು ಪರಾರಿಯಾಗಿದ್ದಾರೆ. ಆರೋಪಿತರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
-ಮಂಜು ಕಲಾಲ್, ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
29/11/2024 06:37 pm