ವಿಜಯಪುರ: ಮುಗ್ಧ ರೈತರಿಗೆ ಬಹಳ ಸಲೀಸಾಗಿ ಅವರನ್ನ ವಂಚಿಸಿ ಬಿಡ್ತಾರೆ. ರೈತ ಬೆಳೆದ ದಾಳಿಂಬೆ ಖರೀದಿ ಮಾಡುವ ನೆಪದಲ್ಲಿ ಬಂದ ಖದೀಮರು ಅರ್ಧ ಹಣ ನೀಡಿ ಇನ್ನುಳಿದ ಹಣ ನೀಡದೆ ವಂಚಿಸಿ ಹೋಗಿದ್ದಾರೆ.
ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ಸುಭಾಸ ಹಿಟ್ನಳ್ಳಿ, ಗುರಪ್ಪಾ ಹಿಟ್ನಳ್ಳಿ ಸಹೋದರರು ತಮ್ಮ ಮೂರು ಎಕರೆ ಜಮೀನಲ್ಲಿ ದಾಳಿಂಬೆ ಬೆಳದಿದ್ದರು. ಈ ದಾಳಿಂಬೆ ಬೆಳೆಯನ್ನ ಖರೀದಿಸಲು ದಾವಣಗೆರಿ ಮೂಲದ ರಫೀಕ್ ಶೇಖ್ ಸೇರಿದಂತೆ ನಾಲ್ವರು ರೈತರ ಸೋಗಿನಲ್ಲಿ ಬಂದು ಬೆಳೆ ಖರೀದಿಸಿ 6.5 ಲಕ್ಷ ಪಂಗನಾಮ ಹಾಕಿದ್ದಾರೆ.
ರಫೀಕ್ ಆ್ಯಂಡ್ ಗ್ಯಾಂಗ್ ಎರಡು ದಿನದ ಹಿಂದೆ ಜಂಬಗಿ ಗ್ರಾಮದ ಪಕ್ಕದ ನಾಗಠಾಣ ಗ್ರಾಮಕ್ಕೆ ಬಂದು ವಾಸ್ತವ್ಯ ಮಾಡಿದ್ದರಂತೆ. ನಂತರ ಸುತ್ತಮುತ್ತಲು ದಾಳಿಂಬೆ ಬೆಳೆ ಬೆಳೆದ ರೈತರ ಬಗ್ಗೆ ವಿಚಾರಿಸಿದ್ದಾರೆ.
ಆಗ ಸುಭಾಸ, ಗುರಪ್ಪ ಸಹೋದರರು ದಾಳಿಂಬೆ ಬೆಳೆ ಬೆಳದದನ್ನ ಪತ್ತೆ ಹಚ್ಚಿ ಅವರ ಜಮೀನಿಗೆ ತೆರಳಿದ್ದಾರೆ. ಒಟ್ಟು ಮೂರು ಎಕರೆ ಜಮೀನಿನ ದಾಳಿಂಬೆಗೆ 12 ಲಕ್ಷ ಹೊಂದಿಸಿದ್ದಾರೆ. ನಂತರ 5.5 ಲಕ್ಷ ರೂ ಹಣ ನೀಡಿ ಬೆಳೆಯಲ್ಲಿಯ ಒಳ್ಳೆಯ ದಾಳಿಂಬೆಯ ಒಂದು ಲೋಡ್ ಕೊಂಡೊಯ್ದಿದ್ದಾರೆ. ನಂತರ ಮರು ದಿನ ಬಂದು ಉಳಿದ ಹಣ ನೀಡುವುದಾಗಿ ಹೇಳಿ ಎರಡು ವಾಹನದಲ್ಲಿ ಲೋಡ್ ಮಾಡಿ ದಾಳಿಂಬೆಯನ್ನ ಹಣ ನೀಡುತ್ತೇವೆ ಅಂತಾ ಪುಸಲಾಯಿಸಿ ಹಾಗೆ ತೆರಳಿದ್ದಾರೆ. ನಂತರ ಹಣ ಕೇಳಿದ್ರೇ ಯಾವ ದಾಳಿಂಬೆ ಅಂತಾ ತಗಾದೆ ತಗೆಯುತ್ತಿದ್ದಾರಂತೆ...
ರೈತ ಸುಭಾಸ್ ಆಜಾದ್ ನಗರ ಪೊಲಿಸ್ ಠಾಣೆಗೆ ಹೋಗಿ ಆದ ಘಟನೆ ಬಗ್ಗೆ ದೂರಿದ್ದಾರೆ. ಆಗ ಪೊಲಿಸರು ಆತರನ್ನು ವಿಚಾರಣೆ ನಡೆಸಿದಾಗ ಇವರ ಹತ್ತಿರ ಖರಿದಿಸಿಲ್ಲ ಅಂತಾ ರೀಲ್ ಬಿಟ್ಟಿದ್ದಾರೆ. ಹೀಗಾಗಿ ವಿಜಯಪುರ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ವಂಚನೆಗೊಳಗಾದ ರೈತ ಸುಭಾಸ ರಫಿಕ್ ಸೇರಿ ನಾಲ್ವರ ಮೇಲೆ ದೂರು ದಾಖಲಿಸಿದ್ದಾರೆ.
ಇನ್ನೂ ಈ ಪ್ರಕರಣವನ್ನು ಪೊಲೀಸರು ಹೇಗೆ ಬೇಧಿಸುತ್ತಾರೋ ಕಾದು ನೊಡಬೇಕಾಗಿದೆ.
-ಮಂಜು ಕಲಾಲ, ಪಬ್ಲಿಕ್ ನೆಕ್ಸ್ಟ ವಿಜಯಪುರ
PublicNext
30/11/2024 10:12 pm